100ರ ಸಂಭ್ರಮದಲ್ಲಿ 3ಪಡೆಗಳಲ್ಲಿ ಸೇವೆ ನಿರ್ವಹಿಸಿರುವ ಏಕೈಕ ಯೋಧ !

ಹೊಸದಿಲ್ಲಿ: ದೇಶದ ಮೂರು ರಕ್ಷಣಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ಅವಕಾಶ ದೊರಕುವುದು ಅತ್ಯಪರೂಪ. ಭಾರತೀಯ ಸೇನೆ, ನೌಕ ಮತ್ತು ವಾಯು ಪಡೆಗಳಲ್ಲಿಯೂ ಸೇವೆ ಸಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಏಕೈಕ ಯೋಧರಾಗಿರುವ ನಿವೃತ್ತ ಕರ್ನಲ್ ಪ್ರಿತಿಪಲ್ ಸಿಂಗ್ ಗಿಲ್ ಅವರು ಶುಕ್ರವಾರ 100 ವಸಂತಗಳನ್ನು ಪೂರೈಸಿದ್ದಾರೆ.
ಭಾರತದ ರಕ್ಷಣಾ ಪಡೆಗಳ ಮೂರು ವಿಭಾಗಗಳಲ್ಲಿಯೂ ಸೇವೆ ಸಲ್ಲಿಸಿರುವ ಕರ್ನಲ್ ಗಿಲ್, ಎರಡನೇ ವಿಶ್ವಯುದ್ಧದ ಪೂರ್ವದಲ್ಲಿ ಭಾರತೀಯ ವಾಯು ಪಡೆಯಲ್ಲಿ ಪೈಲೆಟ್ ಆಗಿ ವೃತ್ತಿ ಆರಂಭಿಸಿದರು. ಬಳಿಕ ನೌಕಾ ಪಡೆಗೆ ಸೇರಿದ ಗಿಲ್ ಅವರು ಅದಾದ ನಂತರ ಸೇನೆಯಲ್ಲಿ ಗನ್ನರ್ ಅಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಎರಡನೇ ವಿಶ್ವ ಸಮರ ಮತ್ತು 1965ರಲ್ಲಿ ನಡೆದ ಭಾರತ-ಪಾಕಿಸ್ಥಾನ ಯುದ್ಧದಲ್ಲಿಯೂ ಈ ಹಿರಿಯ ರಕ್ಷಣಾ ಅಕಾರಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಗೂ ಮೊದಲು, ಕರ್ನಲ್ ಪ್ರಿತಿಪಲ್ ಸಿಂಗ್ ಗಿಲ್ ಅವರು ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್‍ನಲ್ಲಿ ಸೆಕ್ಟರ್ ಕಮಾಂಡರ್ ಆಗಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮಂದಿ ನಿವೃತ್ತ ಅಕಾರಿಗೆ 100ನೇ ಹುಟ್ಟು ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ