ಇಂಗ್ಲೆಂಡ್‍ನಿಂದ ವಿಮಾನ ಹತ್ತುವ ಮುನ್ನ ನೆಗೆಟಿವ್ ವರದಿ ಕೈಲಿರಲಿ: ಅಮೆರಿಕ

ಹೊಸದಿಲ್ಲಿ: ಇಂಗ್ಲೆಂಡ್‍ನಿಂದ ಅಮೆರಿಕಕ್ಕೆ ಪ್ರಯಾಣಿಸುವ ವಿಮಾನ ಪ್ರಯಾಣಿಕರು ಕೊರೋನಾ ನೆಗೆಟಿವ್ ವರದಿ ಹೊಂದಿರಬೇಕೆಂದು ಸೂಚಿಸಲಾಗಿದೆ. ಇಂಗ್ಲೆಂಡ್‍ನಲ್ಲಿ ರೂಪಾಂತರಿತ ಹೊಸ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಪ್ರಯಾಣಕ್ಕಿಂತ ಮೊದಲ ಮೂರು ದಿನಗಳ ಒಳಗೆ ಕೊರೋನಾ ನೆಗೆಟಿವ್ ಹೊಂದಿರುವ ವರದಿ ಹೊಂದಿರಬೇಕು ಮತ್ತು ಅದನ್ನು ವಿಮಾನಯಾನ ಸಂಸ್ಥೆಗೆ ನೀಡಬೇಕೆಂದು ಅಮೆರಿಕದ ರೋಗ ನಿಯಂತ್ರ ಮತ್ತು ಸುರಕ್ಷೆ ಕೇಂದ್ರ (ಸಿಡಿಸಿ) ತಿಳಿಸಿದೆ. ಈ ಕ್ರಮವು ಸೋಮವಾರದಿಂದ ಜಾರಿಗೆ ಬರಲಿದೆ.
ಕಳೆದ ಮಾರ್ಚ್‍ನಲ್ಲಿ ಪ್ರಯಾಣಗಳ ಮೇಲೆ ನಿರ್ಬಂಧ ಹೇರಿಕೆಯಾದ ಬಳಿಕ ಅಮೆರಿಕದಿಂದ ಇಂಗ್ಲೆಂಡ್‍ಗೆ ವಾಯುಯಾನ ಶೇ.90ರಷ್ಟು ಕಡಿತಗೊಂಡಿದೆ ಎಂದು ಸಿಡಿಸಿ ತಿಳಿಸಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ