ಸೈಕಲ್ ಮಾರಾಟದಲ್ಲಿ ಶೇ.250ರಷ್ಟು ಏರಿಕೆ | ಆರೋಗ್ಯಕ್ಕೂ ಇದೇ ಅಸ್ತ್ರ ಸೈಕ್ಲಿಂಗ್ ಮೇಲಿನ ಆಸಕ್ತಿಗೆ ಮೂಲೆ ಸೇರಿದ ಬೈಕ್ !

ಹೊಸದಿಲ್ಲಿ: ಕೋವಿಡ್-19 ನಿಯಂತ್ರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತಹ ಮಹತ್ವವಾಗಿದ್ದು, ಅನೇಕ ಮಂದಿ ಸೈಕ್ಲಿಂಗ್‍ನತ್ತ ಒಲವು ತೋರಿರುವುದರಿಂದ ಸೈಕಲ್‍ಗಳಿಗೀಗ ಬೇಡಿಕೆ ಹೆಚ್ಚಿದೆ. ಮಾತ್ರವಲ್ಲದೆ, ಸೈಕಲ್‍ಗಳ ಮಾರಾಟದಲ್ಲಿ ಹಿಂದೆಂದಿಗಿಂತ ಶೇ. 250ರಷ್ಟು ಏರಿಕೆಯಾಗಿದೆ.
ದೇಶದ ಅತಿದೊಡ್ಡ ಸೈಕಲ್ ತಯಾರಕ ಸಂಸ್ಥೆಯಾದ ಹೀರೋ ಸೈಕಲ್ಸ್ , ಪ್ರೀಮಿಯಂ ಬೈಸಿಕಲ್‍ಗಳ ಮಾರಾಟದಲ್ಲಿ ಶೇ. 250 ಜಿಗಿತ ಕಂಡಿದೆ. ಇದೇ ವೇಳೆ ನಿರ್ದಿಷ್ಟ ಮಾದರಿಯ ಸೈಕಲ್‍ಗಳಿಗಾಗಿ 4 ರಿಂದ 6 ವಾರಗಳವರೆಗೆ ಕಾಯುವಂತಹ ಪರಿಸ್ಥಿತಿಯೂ ಎದುರಾಗಿದೆ ಎಂದರೆ ಸೈಕ್ಲಿಂಗ್ ವಲಯದಲ್ಲಾಗಿರುವ ಏಕಾಏಕಿ ಬೇಡಿಕೆಯ ಅನಾವರಣವಾಗುತ್ತದೆ.
ಜಗತ್ತಿನಾದ್ಯಂತ ಕೋವಿಡ್-19ನಿಂದಾಗಿ ಮಾರ್ಚ್‍ನಿಂದ ತಿಂಗಳುಗಳವರೆಗೆ ಲಾಕ್‍ಡೌನ್ ಹೇರಿದ್ದ ಪರಿಣಾಮ ಜಿಮ್‍ಗಳು ಸ್ಥಗಿತಗೊಂಡಿದ್ದವು. ಜತೆಗೆ ಬಹಳಷ್ಟು ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದರಿಂದ ದೈಹಿಕ ವ್ಯಾಯಾಮವಿಲ್ಲದೆ ತೊಂದರೆಗೊಳಗಾದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಬಹಳಷ್ಟು ಮಂದಿ ಸೈಕ್ಲಿಂಗ್‍ಗೆ ಮೊರೆ ಹೋಗಿದ್ದಾರೆ. ಇದರಿಂದ ವ್ಯಾಯಾಮದ ಜತೆಗೆ ಕೊರೋನಾ ಸೋಂಕಿನಿಂದ ಸ್ವಲ್ಪ ಮಟ್ಟಿಗೆ ಸುರಕ್ಷತೆಯನ್ನೂ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎನ್ನುವುದು ಹಲವರ ಅನಿಸಿಕೆ. ಸೈಕಲ್‍ನೆಡೆಗಿನ ಜನರ ಒಲವು ಸೈಕಲ್ ತಯಾರಿಕಾ ಸಂಸ್ಥೆಗಳಿಗೆ ವರದಾನವಾಗಿ ಪರಿಣಮಿಸಿದೆ. ಮಾತ್ರವಲ್ಲದೆ, ಸೈಕ್ಲಿಂಗ್ ಉದ್ಯಮ ಹಿಂದೆಂದಿಗಿಂತಲೂ ಉನ್ನತ ಮಟ್ಟದತ್ತ ಸಾಗಿದೆ.
ಜನರ ಆಸಕ್ತಿ ಸೈಕ್ಲಿಂಗ್‍ನತ್ತ ಹರಿದಿರುವುದರಿಂದ ಮತೆ ್ತ ಸೈಕ್ಲಿಂಗ್ ಕ್ರೀಡೆ ಮುನ್ನೆಲೆಗೆ ಬಂದಿದೆ. ಇದರ ಫಲಿತಾಂಶವಾಗಿ ಸೈಕಲ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲಿಯೂ ಮುಖ್ಯವಾಗಿ ಪ್ರೀಮಿಯಂ (ದುಬಾರಿ ಬೆಲೆ) ಸೈಕಲ್‍ಗಳಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಈ ಸೈಕಲ್‍ಗಳ ತೀವ್ರ ಕೊರತೆ ಎದುರಗಿದೆ. ಈ ಮೊದಲು ಸೈಕ್ಲಿಂಗ್ ಉದ್ಯಮ ಇಂತಹ ಸಕಾರಾತ್ಮ ಬೆಳವಣಿಗೆಯನ್ನು ಎಂದಿಗೂ ಕಂಡಿರಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ