ನಾಳೆ ಸಿಕ್ಕಿಂಗೆ ರಾಜನಾಥ್

ಹೊಸದಿಲ್ಲಿ : ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆಯೇ ಸಿಕ್ಕಿಂನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಘಟಕಕ್ಕೆ ಸೈನಿಕರ ಮನೋಬಲ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ದಸರಾ ದಿನದಂದು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಅಕ್ಟೋಬರ್ 23-24 ರಂದು ಸಿಕ್ಕಿಂಗೆ ಸಚಿವರು ಭೇಟಿ ನೀಡುವ ಸಾಧ್ಯತೆ ಇದ್ದು, ಇದೇ ವೇಳೆ ಹಲವು ರಸ್ತೆ ಯೋಜನೆಗಳನ್ನೂ ಕೂಡ ಉದ್ಘಾಟಿಸಲಿದ್ದಾರೆ.
ಅಲ್ಲದೆ, ಹಿಂದೂ ಸಂಪ್ರದಾಯದ ಪ್ರಕಾರ ಚೀನಾ ಗಡಿ ಸಮೀಪದ ಸಿಕ್ಕಿಂನಲ್ಲಿ ನಿಯೋಜನೆಗೊಂಡ ಸ್ಥಳೀಯ ಸೇನಾ ಘಟಕದಲ್ಲೇ ಆಯುಧಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ.
ಕಳೆದವರ್ಷ ಫ್ರಾನ್ಸ್‍ನಲ್ಲಿ ರಾಫೆಲ್ ಸ್ವೀಕರಿಸಿ, ಅದಕ್ಕೆ ಆಯುಧ ಪೂಜೆ ನೆರವೇರಿಸುವ ಮೂಲಕ ರಾಜನಾಥ್ ಹಬ್ಬ ಆಚರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ