ವಿವೇಕಾನಂದ ಪುತ್ಥಳಿ ಅನಾವರಣ | ವಿದ್ಯಾರ್ಥಿಗಳಿಗೆ ಪ್ರಧಾನಿ ಕರೆ ಸಿದ್ಧಾಂತ ರಾಷ್ಟ್ರ ಹಿತಾಸಕ್ತಿಗೆ ಧಕ್ಕೆಯಾಗದಿರಲಿ: ಮೋದಿ

ಹೊಸದಿಲ್ಲಿ: ನಮ್ಮ ಸೈದ್ಧಾಂತಿಕ ನಿಲುವು ಎಂದಿಗೂ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಗುರುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‍ಯು)ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ವೀಡಿಯೋ ಕಾನರೆನ್ಸ್ ಮೂಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಜನರ ನಡುವೆ ಸೈದ್ಧಾಂತಿಕ ವ್ಯತ್ಯಾಸಗಳಿರಬಹುದು. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ದೇಶವನ್ನು ಬೆಂಬಲಿಸುವ ಸಿದ್ಧಾಂತಗಳಿರಬೇಕೆ ಹೊರತು ವಿರೋಸುವಂತದಾಗಿರಬಾರದು ಪ್ರತಿಪಾದಿಸಿದ್ದಾರೆ.

ದೇಶದ ಹಿತಾಸಕ್ತಿಗಿಂತ ಒಬ್ಬರ ಸಿದ್ಧಾಂತಕ್ಕೆ ಆದ್ಯತೆ ನೀಡುವುದು ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿದೆ. ಉತ್ತಮ ಸುಧಾರಣೆಗಳು ಈ ಹಿಂದೆ ಕೆಟ್ಟ ರಾಜಕಾರಣ ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ ತಮ್ಮ ಸರ್ಕಾರದ ಉದ್ದೇಶ ಮತ್ತು ಬದ್ಧತೆ ಶುದ್ಧವಾಗಿರುವುದರಿಂದ ಈಗ ಉತ್ತಮ ರಾಜಕೀಯವಿದೆ. ಅಲ್ಲದೆ, ಇದು ಬಡವರಿಗಾಗಿ ಸುರಕ್ಷತೆಯ ಅಸ್ತ್ರವಾಗಿದೆ. ತಮ್ಮ ಮತಗಳೊಂದಿಗೆ ಜನತೆ ನಮ್ಮ ಸುಧಾರಣಾ ಕ್ರಮಗಳನ್ನು ದೃಢಪಡಿಸಿದ್ದಾರೆ ಎಂದಿದ್ದಾರೆ.
ವಿಶ್ವವಿದ್ಯಾಲಯದ ಆವರಣದಲ್ಲಿರುವ ಪುತ್ಥಳಿಯು ಪ್ರತಿಯೊಬ್ಬರಿಗೂ ಸೂರ್ತಿದಾಯಕವಾಗಿದ್ದು ಧೈರ್ಯವನ್ನು ತುಂಬುತ್ತದೆ. ಏಕೆಂದರೆ, ವಿವೇಕಾನಂದರು ಪ್ರತಿಯೊಬ್ಬರಲ್ಲಿಯೂ ಇಂತಹ ಗುಣಗಳಿರಬೇಕೆಂದು ಬಯಸಿದ್ದರು ಎಂದು ಮೋದಿ ತಿಳಿಸಿದ್ದಾರೆ.
ದೇಶದಲ್ಲಿ ಶಿಕ್ಷಣವು ಜನರಿಗೆ ಆತ್ಮವಿಶ್ವಾಸವನ್ನು ನೀಡುವಂತಿರಬೇಕು. ಅಲ್ಲದೆ, ಜನತೆಯನ್ನು ಎಲ್ಲ ರೀತಿಯಲ್ಲಿಯೂ ಆತ್ಮನಿರ್ಭರರನ್ನಾಗಿಸುವಂತೆ ಮಾಡಬೇಕೆಂದು ಸ್ವಾಮಿ ವಿವೇಕಾನಂದರು ಬಯಸಿದ್ದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದೇ ಮಾರ್ಗದಲ್ಲಿದೆ ಎಂದು ಮೋದಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ