ಗ್ರಾಮೀಣ ಪ್ರದೇಶದಲ್ಲಿ ಕುಸಿಯುತ್ತಿರುವ ಮನೆಗಳು

ಬಾಗಲಕೋಟೆ : ಬಾಗಲಕೋಟೆ ತಾಲೂಕಿನಲ್ಲಿ ಬುಧವಾರದವರೆಗೆ ಮಳೆಯಿಂದ 400 ಮನೆಗಳು ಕುಸಿದಿದ್ದು ಇದರಲ್ಲಿ ಎರಡು ಮನೆಗಳು ಪೂರ್ಣ ಪ್ರಮಾಣದ ಹಾನಿಯಾಗಿದೆ. ಕಿರಸೂರ ಗ್ರಾಮದಲ್ಲಿ 1 ಮತ್ತು ಬೆಣ್ಣೂರಿನಲ್ಲಿ 1 ಮನೆಗಳು ಪೂರ್ಣ ಪ್ರಮಾಣದ ಹಾನಿಯಾಗಿದೆ ಎಂದು ಬಾಗಲಕೊಟೆ ತಹಶೀಲ್ದಾರ ಹಿರೇಮಠ ತಿಳಿಸಿದ್ಧಾರೆ.
ಹುನಗುಂದ ತಾಲೂಕಿನಲ್ಲಿ 431 ಮನೆಗಳಿಗೆ ಮಳೆಯಿಂದ ಹಾನಿಯಾಗಿದ್ದು ಇದರಲ್ಲಿ 131 ಮನೆಗಳು ವಾಸಕ್ಕೆ ಯೋಗ್ಯವಲ್ಲದಂತ ಸ್ಥಿತಿಯಲ್ಲಿ ಹಾನಿಯಾಗಿದೆ ಎಂದು ವರದಿಯಾಗಿದೆ.
ಜಮಖಂಡಿ ತಾಲೂಕಿನಲ್ಲಿ 50 ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಇನ್ನೂ ಐದು ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಹುನ್ನೂರಿನ್ಲಲಿ 2, ಕಡಪಟ್ಟಿ 5, ಸಿದ್ದಾಪುರ 3, ಮೈಗೂರ 1(ಪೂರ್ಣ), 1 ಭಾಗಶ:, ಮದರಖಂಡಿ 3, ಹುಲ್ಯಾಳ 5, ಹುಣಶಿಕಟ್ಟಿ 2, ಜಮಖಂಡಿ ನಗರ 6, ಸಾವಳಗಿ(ಪೂರ್ಣ)1, ಟಕ್ಕಳಕಿ1, ಖಾಜಿಬೀಳಗಿ 1(ಪೂರ್ಣ),1 ಭಾಗಶ: ಹಿರೇಪಡಸಗಲಿ 2, ತೊದಲಬಾರಿ 2, ಅಡಿಹುಡಿ 3, ಕನ್ನೊಳ್ಳಿ 1, ಗದ್ಯಾಳ2, ಗೋಠೆ 1, ತುಂಗಳ3 ಕಲಬೀಳಗಿ 5 ಜಂಬಗಿ ಕೆ.ಡಿ 1 ಮನೆಗಳು ಮಳೆಯಿಂದ ಹಾನಿಯಾಗಿವೆ ಎಂದು ಜಮಖಂಡಿ ತಹಶೀಲ್ದಾರ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ