ರೈತರು ಪ್ರತಿಭಟನೆ ಹಿಂಪಡೆಯಲಿ ಎಂದು ಸಮೀಕ್ಷೆಯಲ್ಲಿ ಒಲವು ಕೃಷಿ ಕಾಯ್ದೆಗೆ ಬಹುತೇಕರ ಬೆಂಬಲ

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಾಗ, ದೇಶದ ಬಹುತೇಕರು ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ರೈತರು ಹಿಂಪಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ನ್ಯೂಸ್18 ನೆಟ್‍ವರ್ಕ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಮೂಲಕ ವಿಪಕ್ಷಗಳ ಅಪಪ್ರಚಾರದ ನಡುವೆಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ಜನರು ವಿಶ್ವಾಸ ಹೊಂದಿರುವುದು ಸಾಬೀತಾಗಿದೆ.
ಸುಮಾರು 22 ರಾಜ್ಯಗಳಲ್ಲಿ ನಡೆದ ಸಮೀಕ್ಷೆಯಲ್ಲಿ 2400 ಮಂದಿ ಭಾಗಿಯಾಗಿದ್ದು, ಈ ಪೈಕಿ ಬಹುತೇಕರು ಕೇಂದ್ರದ ಕಾಯ್ದೆಗಳು ರೈತರ ಒಳಿತಿಗಾಗಿ ಎಂದು ನಂಬಿದ್ದಾರೆಂದು ತಿಳಿದುಬಂದಿದೆ. ಅದರಲ್ಲೂ ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ , ತೆಲಂಗಾಣದಲ್ಲಿ ಕಾಯ್ದೆಗಳಿಗೆ ಹೆಚ್ಚಾಗಿ ಜನರು ಬೆಂಬಲ ಸೂಚಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಶೇ.53ರಷ್ಟು ಮಂದಿ ಕಾಯ್ದೆಯಿಂದ ರೈತರಿಗೆ ಲಾಭವಾಗಲಿದೆ ಎಂಬ ಅಭಿಪ್ರಾಯ ಹೊಂದಿದ್ದರೆ, ಶೇ.56.59ರಷ್ಟು ಮಂದಿ ರೈತರು ಪ್ರತಿಭಟನೆ ನಿಲ್ಲಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಕಾಯ್ದೆಗಳ ಅನ್ವಯ ತಮ್ಮ ಕೃಷಿ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಯ ಹೊರೆಗೆ ಮಾರುವ ಸ್ವಾತಂತ್ರ್ಯ ದೊರೆತಿದ್ದು, ಈ ನಿರ್ಧಾರಕ್ಕೆ ಶೇ.73ರಷ್ಟು ಮಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನೂತನ ಕಾಯ್ದೆ ಅನ್ವಯವೇ ರೈತರ ಬೆಳೆಗೆ ಹೆಚ್ಚಿನ ಬೆಂಬಲ ಬೆಲೆ ದೊರೆಯಲಿದೆ ಎಂದು ಶೇ.60.9ರಷ್ಟು ಮಂದಿ ನಂಬಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ