ಬೆಳಗಾವಿ:ಫೆ-೧೮: ಸುಮಾರು 40 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಪತ್ರಿಕಾ ಕರ್ಮಿ ಹಾಗೂ ಸುಮಾರು 10 ಚಲನಚಿತ್ರಗಳಲ್ಲಿ ನಟಿಸಿರುವ ರಂಗಭೂಮಿ ಕಲಾವಿದ, ಉತ್ತರ ಕರ್ನಾಟಕದ ಹಿರಿ-ಕಿರುತೆರೆ ಕಲಾವಿದರ ಸಂಘದ ಕಾರ್ಯದರ್ಶಿ, ಹಾಗೂ ಕೆ ಎಲ್ ಇ ವಿಶ್ವವಿದ್ಯಾಲಯದ ಮಾಧ್ಯಮ ಸಂಯೋಜಕ ಎನ್ ನಟರಾಜ್ ಹಂಜಗಿಮಠ ಮತ್ತು ಚಿತ್ರ ನಿರ್ದೇಶಕ ಆರ್ ರವೀಂದ್ರ ಅವರನ್ನು ಸತ್ಕರಿಸಲಾಯಿತು.
ಬೆಳಗಾವಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಥಾ ಕಮ್ಮಟ ಶಿರದ ಉದ್ಘಾಟನಾ ಸಮಾರಂಭದಲ್ಲಿ ಈ ಇಬ್ಬರು ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಮಂಗಳ ಮೆಟಗುಡ್, ರಂಗಕರ್ಮಿ ಶ್ರೀಪತಿ ಮಂಜನಬೈಲು, ಸಾಹಿತಿ ಅಬ್ದುಲ್ ರಹಮಾನ್ ಪಾಶಾ, ವಿಜಯಾನಂದ ಸ್ವಾಮಿಜಿ ಉಪಸ್ಥಿತರಿದ್ದರು.
KLE,Belagavi,Kannada sahitya parishad