ಜನಸೇವಕ ಸಮಾವೇಶ ಸಮಾರೋಪ | ಅಮಿತ್ ಶಾ ಸವಾಲು ಕಾಂಗ್ರೆಸ್ ರಾಜ್ಯಕ್ಕೆ ನೀಡಿದ ಅನುದಾನದ ಲೆಕ್ಕ ನೀಡಲಿ

ಬೆಳಗಾವಿ: ಮನಮೋಹನ್ ಸಿಂಗ್ ಅಕಾರ ಅವಯಲ್ಲಿ ಕರ್ನಾಟಕಕ್ಕೆ ನೀಡಿದ ಅನುದಾನದ ಲೆಕ್ಕವನ್ನು ಕಾಂಗ್ರೆಸ್ ನೀಡಲಿ ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಬಹಿರಂಗ ಸವಾಲು ಹಾಕಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬಿಜೆಪಿಯ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕಿಂತಲೂ ಇಂದಿನ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಮನಮೋಹನ್ ಸಿಂಗ್ ಸರ್ಕಾರ 13 ಹಣಕಾಸು ಯೋಜನೆಯಲ್ಲಿ ಕರ್ನಾಟಕಕ್ಕೆ 88,583 ಕೋಟಿ ರೂ. ಅನುದಾನ ಕೊಟ್ಟಿದೆ. ಬಿಜೆಪಿ ಸರ್ಕಾರ 14ನೇ ಹಣಕಾಸು ಯೋಜನೆಯಡಿ 2,19,506 ಕೋಟಿ ರೂ. ಹಣ ನೀಡಿದೆ ಎಂದರು.
ಬಡವರನ್ನು ಓಡಿಸಿದ್ದಾರೆ
ನಾಲ್ಕು ತಲೆಮಾರಿನ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೆ ಶೂನ್ಯ ಕೊಡುಗೆ ನೀಡಿದೆ. ಬಡತನ ಹೋಗಲಾಡಿಸುತ್ತೇವೆ ಎಂದು ಹೇಳುತ್ತಲೇ ಬಡವರನ್ನು ಓಡಿಸುವ ಕೆಲಸ ಮಾಡಿದೆ.
ಬೆಂಕಿಯಂಥ ಸಮಸ್ಯೆ ಪರಿಹಾರ
70 ವರ್ಷದಿಂದ ಕಾಶ್ಮೀರ ಸಮಸ್ಯೆ ಸರಿಪಡಿಸಲು ಯಾರೂ ಮುಂದೆ ಬರಲಿಲ್ಲ. ಬೆಂಕಿಯಂತಹ ಸಮಸ್ಯೆಯನ್ನು ಮೋದಿ ಸರ್ಕಾರ ಸುಗಮವಾಗಿ ಬಗೆಹರಿಸಿ ಕಾಶ್ಮೀರದಲ್ಲಿ ತಿರಂಗಾ ಆಕಾಶದೆತ್ತರಕೆ ಹಾರುವಂತೆ ಮಾಡಿದೆ. ತ್ರಿವಳಿ ತಲಾಖ್ ರದ್ದುಗೊಳಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದೆ ಎಂದರು.
ಕೋಟ್ಯಂತರ ಜನರ ಕನಸಾಗಿದ್ದ ರಾಮಮಂದಿರ ನಿರ್ಮಾಣದ ತೊಡಕನ್ನು ಪ್ರಧಾನಿ ಮೋದಿ ಸರ್ಕಾರ ನಿವಾರಿಸಿದೆ. ಜನರ ಆಶಯವಾಗಿದ್ದ ಮಂದಿರ ನಿರ್ಮಾಣವನ್ನು ವಿರೋಧ ಪಕ್ಷಗಳು ವಿರೋಸಿದವು. ಇದನ್ನು ಲೆಕ್ಕಿಸದೆ ಪ್ರಧಾನಿ ಮೋದಿ ಶಿಲಾನ್ಯಾಸ ನೇರವೇರಿಸಿದ್ದಾರೆ. ಶೀಘ್ರದಲ್ಲಿ ಮಂದಿರ ಆಕಾಶ ಮುಟ್ಟಲಿದೆ ಎಂದರು.
ನುಗ್ಗಿ ಹೊಡೆಯುತ್ತೇವೆ
70 ವರ್ಷಗಳಲ್ಲಿ ನಮ್ಮ ಸೈನಿಕರ ತಲೆ ಕತ್ತರಿಸಿಕೊಂಡು ಹೋದರೂ ಯಾರೂ ಕೇಳುತ್ತಿರಲಿಲ್ಲ. ಆದರೆ, ಸದ್ಯದ ಪರಿಸ್ಥಿತಿ ಬದಲಾಗಿದೆ. ವೈರಿಗಳಿಗೆ ತಕ್ಕ ಉತ್ತರ ನೀಡುತ್ತಿದ್ದೇವೆ. ನಮ್ಮ ವಿರುದ್ಧ ತಿರುಗಿ ಬೀಳುವವರ ನೆಲೆಯೊಳಗೆ ನುಗ್ಗಿ ಹೊಡೆಯುತ್ತಿದ್ದೇವೆ. ಸರ್ಜಿಕಲ್ ಸ್ಟ್ರೈಕ್, ಏರ್‍ಸ್ಟ್ರೈಕ್ ಮಾಡುವ ಮೂಲಕ ವೈರಿಗಳ ಸಂಹಾರಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದರು.
ತನ್ನ 70 ವರ್ಷದ ಅಕಾರವಯಲ್ಲಿ ಗ್ಯಾಸ್, ವಿದ್ಯುತ್, ನೀರು, ಮನೆ, ಆಯುಷ್ಮಾನ್‍ನಂಥ ಆರೋಗ್ಯ ಯೋಜನೆಗಳನ್ನು ಸರ್ಕಾರ ನೀಡಲಿಲ್ಲ. ಇಂತಹ ಜನಪರ ಯೋಜನೆಗಳನ್ನು ಕೇವಲ 6 ವರ್ಷಗಳ ಅವಯಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ ಎಂದರು.
2022ರ ವೇಳೆಗೆ ಪ್ರತಿ ಮನೆಗೆ ಶುದ್ಧ ನೀರು ಕೊಡುವ ಯೋಜನೆ ಮೋದಿ ಸರ್ಕಾರ ಪೂರ್ಣಗೊಳಿಸಲಿದೆ. ದೇಶದ ಗಡಿ ಸುರಕ್ಷೆ ಮಾಡಲಾಗಿದೆ. ಆತ್ಮ ನಿರ್ಭರ ಸಾಕಾರ ಮಾಡಿದರೆ, ಭಾರತ ಆರ್ಥಿಕವಾಗಿ ತಾನಾಗಿಯೇ ನಂಬರ್ ಒನ್ ಆಗಲಿದೆ. ಪ್ರತಿ ಗ್ರಾಮವನ್ನು ಕಂಪ್ಯೂಟರ್‍ನೊಂದಿಗೆ ಜೋಡಿಸುವ ಕೆಲಸ ನಡೆದಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ