ರೈತರ ಸಾಲಮನ್ನಾ ಬಗ್ಗೆ ಬಿಎಸ್ ವೈ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ: ಸಿಎಂ ಕುಮಾರಸ್ವಾಮಿ

ಬೆಳಗಾವಿ: ರೈತರ ಸಾಲಮನ್ನಾ ಬಗ್ಗೆ ಬಿ.ಎಸ್​.ಯಡಿಯೂರಪ್ಪ ಅವರು ನೀಡುವ ಪ್ರಮಾಣ ಪತ್ರ ಅಗತ್ಯವಿಲ್ಲ. ಬೇಕಾದರೆ, ವಿರೋಧ ಪಕ್ಷದವರು ಪ್ರತಿಭಟನೆ ‌ಮಾಡಿಕೊಳ್ಳಲಿ. ಋಣಮುಕ್ತ ಪತ್ರ ಹಾಗೂ ಸಾಲಮನ್ನಾ ಬಗ್ಗೆ ಸದನದಲ್ಲೇ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಮಂಡಲದ ಅಧಿವೇಶನ ಆರಂಭಕ್ಕೂ ಮುನ್ನ ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ಣಾಣದಲ್ಲಿ ಮಾತನಾಡಿದ ಅವರು ಯಾವುದೇ ಸಮಸ್ಯೆಯಿಲ್ಲದೆ ಅಧಿವೇಶನ ಸುಲಲಿತವಾಗಿ ನಡೆಯಲಿದೆ ಎಂದು ಹೇಳಿದರು.

ಅಧಿವೇಶನ ಮುಗಿದ ಬಳಿಕ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ನಿರ್ಧಾರಕ್ಕೆ ನನ್ನ ಸ್ವಾಗತವಿದೆ. ಋಣಮುಕ್ತ ಪತ್ರ ಕೊಟ್ಟಿಲ್ಲ, ಸಾಲಮನ್ನಾ ಆಗಿಲ್ಲ ಎಂಬ ಬಿಜೆಪಿಯ ಆರೋಪಕ್ಕೆ ಸದನದಲ್ಲೇ ತಕ್ಕ ಉತ್ತರ ನೀಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.

belagavi, winter-session,congress-jds alliance,cm hd kumaraswamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ