ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ: ಡಾ.ಪ್ರಭಾಕರ ಕೋರೆ

ಬೆಳಗಾವಿ:ಫೆ-18: ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಇಂದು ಬಹುತೇಕ ವಿದೇಶಿಯರು ಸಂಗೀತಕ್ಕೆ ಮಾರುಹೋಗಿ ಭಾರತಕ್ಕೆ ಬಂದು ಸಂಗೀತ ಕಲಿಯುತ್ತಿದ್ದಾರೆ. ಪಂ.ಗಂಗೂಬಾಯಿ ಹಾನಗಲ್ ಹಾಗೂ ಬೀಮಸೇನ ಜೋಷಿಯವರಂತಹ ಮಹಾನ್ ಸಂಗೀತಗಾರರನ್ನು ಪಡೆದಿರುವ ನಮ್ಮ ದೇಶ ಹಾಗೂ ಉತ್ತರ ಕರ್ನಾಟಕ ಧನ್ಯ ಎಂದು ಕೆ ಎಲ್ ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕುಲಾಧಿಪತಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

ಕೆ ಎಲ್ ಇ ಸಂಗೀತ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಶಾಲೆಯ ಸಂಸ್ಥಾಪಕ ಪಂ.ಹಯವದನ ಜೋಷಿಯವರ ಪುಣ್ಯತಿಥಿ ಅಂಗವಾಗಿ ಕೆ ಎಲ್ ಇ ಸಂಗೀತ ಶಾಲೆಯ ಋತ್ವಿಕ್ ಫೌಂದೇಷನ್ ಹಾಗೂ ಸ್ವರತೀರ್ಥ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿದ್ಜನಿ ಕಾರ್ಯಕ್ರಮದ ಮುಖ್ಯಾತಿಥಿಗಳಾಗಿ ಮಾತನಾಡಿದ ಅವರು, ಪಂ.ಗಂಬೂಬಾಯಿ ಹಾನಗಲ್ ಅವರ ಆದೇಶದಂತೆ ಕೆ ಎಲ್ ಇ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಯಶಸ್ವಿ 10 ವರ್ಷ ಪೂರೈಸಿದೆ. ದೇಹಕ್ಕೆ ಮುದ ನೀಡುವ, ಆರೋಗ್ಯವನ್ನು ವೃದ್ಧಿಸುವ ಸಂಗೀತಕ್ಕೆ ಗಿಡ-ಮರಗಳು, ಪ್ರಾಣಿ-ಪಕ್ಷಿಗಳು ಸಹ ಮಾರುಹೋಗುತ್ತವೆ. ಆದರೆ ಸುಂದರ ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ ಕಾಣುತ್ತಿರುವುದು ದುರಾದೃಷ್ಠ ಎಂದರು.

ಸಂಗೀತ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆ ಎಲ್ ಇ ಸಂಗೀತ ಶಾಲೆ ಪ್ರತಿವರ್ಷ 3 ದಿನಗಳ ಕಾಲ ಸಂಗೀತ ಉತ್ಸವವನ್ನು ಆಚರಿಸಲಿದೆ ಎಂದು ಇದೇ ವೇಳೆ ಕೋರೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾಂಸ ಜಯತೀರ್ಥ ಮೇವುಂಡಿ, ಟಾಟ ಕ್ಯಾಪಿಟಲ್ ಫೈನಾನ್ಸ್ ಸರ್ವೀಸ್ ಲಿ.ನ ಕಾರ್ಯಕಾರಿ ನಿರ್ದೇಶಕ ಪ್ರವೀಣ್ ಕಡ್ಲಿ, ಆಶಾತಾಯಿ ಕೋರೆ, ಪ್ರಾಂಶುಪಾಲರಾದ ಡಾ.ಸ್ನೇಹ ರಾಜೋರಿಕರ, ಡಾ.ರಾಜೇಂದ್ರ ಬಾಂಡಾಣಕರ, ಸುನೀತ ಪಾಟೀಲ್, ದುರ್ಗ ನಾಡಕರ್ಣಿ, ಜಿತೇಂದ್ರ ಸೈಬಣ್ಣವರ್, ಯದುವೇಂದ್ರ ಪೋಜಾರಿ ಮುಂತಾದವರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆದ ಸಂಗೀತ ಹಬ್ಬದಲ್ಲಿ ಸಂಸ್ಥೆಯ ವಿದ್ಯಾರ್ಥಿ 7ನೇ ತರಗತಿಯ ಹನುಮೇಶ ಹೆಗಡೆ ಬೀಮ ಪೌಲಾಸ್ ರಾಗದಲ್ಲಿ ಸಂಗೀತವನ್ನು ಅದ್ಭುತವಾಗಿ ಹಾಡಿ ಜನಮನಸೂರೆಗೊಳಿಸಿದರು.

ಇನ್ನು ಯಲ್ಲಾಪುರದ ಗಣಪತಿ ಭಟ್ ತಂಡದವರಿಂದ ಯಕ್ಷಗಾನ, ಜುಗಲ್ ಬಂದಿ ನಡೆಯಿತು. ಅಲ್ಲ್ಲದೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಿತಾರ ವಾದನ ಸೇರಿದಂತೆ ಹಲವು ವಿಧದ ಸಂಗೀತ ಕಾರ್ಯಕ್ರಮ ನಡೆದವು.

ಫೆ.19ರಂದು ಬೆಳಿಗ್ಗೆ 12 ಗಂಟೆಗೆ ಖ್ಯಾತ ವಿದ್ವಾಂಸ ಜಯತೀರ್ಥ ಮೇವುಂಡಿ ಇವರು ಕಿರಾಣ ಘರಾಣದ ಸೀಕ್ಷ ವ್ಯತ್ಯಾಸಗಳ ಕುರಿತು ಮಾತನಾಡಲಿದ್ದಾರೆ.

KLE,Belagavi,KLE SCHOOL OF MUSIC PROGRAM INAGURATION,Dr.Prabhakara Kore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ