ಕನ್ನಡ ಸಾಹಿತ್ಯ ಪರಿಷತ್ತಿನಿಂದ, ಕನ್ನಡ ಭವನದಲ್ಲಿ ಪ್ರಥಮ ಬಾರಿಗೆ ಕನ್ನಡ ಧ್ವಜಾರೋಹಣ ಕಾರ್ಯಕ್ರಮ

ಬೆಳಗಾವಿ: ಕನ್ನಡ ರಾಜ್ಯೋತ್ಸವ ಅಂಗವಾಗಿ, ಕನ್ನಡ ಧ್ವಜವನ್ನು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಶ್ರೀ ಮೆಟಗುಡ್ಡ ಇವರು ಹೊಸ ಕನ್ನಡ ಭವನದಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣವನ್ನು ನೆರವೇರಿಸಿದರು.

ಬೆಳಗ್ಗೆ 8:30ಕ್ಕೆ ನಡೆದ ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಡಾ:ಹೇಮಾ ಸೊನೊಳ್ಳಿ ಅವರು ಆಗಮಿಸಿದ್ದರು.ಹಾಗೂ ಸಾಹಿತಿಗಳಾಗಿ ಸ. ರಾ. ಸುಳಕೂಡೆ ಅವರು ಆಗಮಿಸಿ, ಅವರು ಮಾತನಾಡುತ್ತಾ, ಜಿಲ್ಲಾಧ್ಯಕ್ಷರಿಂದ, ಕನ್ನಡದ ಕೆಲಸಗಳು ಇನ್ನೂ ಹೆಚ್ಚು, ಹೆಚ್ಚು, ಆಗಲಿ ಎಂದು ಹಾರೈಸಿದರು.

ಮಂಗಲಾ ಮೆಟಗುಡ್ಡ ಅವರು ಮಾತನಾಡುತ್ತ ಕನ್ನಡ ನುಡಿ ಧ್ವಜ ಒಂದು ಬೇಕೇ ಬೇಕೆಂದರು.ಏಕೆಂದರೆ ಕನ್ನಡಿಗರ ಅಸ್ಥಿಮಿತೆಯ ಉಳುವಿನ ಪ್ರಶ್ನೆ ಇದಾಗಿದೆ, ಎಂದರು.

ಸಾಹಿತಿಗಳಾದ ಆರ್.ಎಸ್.ಚಾಪಗಾಂವಿ ಅವರು ಮಾತನಾಡುತ್ತಾ ಕನ್ನಡ ನುಡಿ ನಮ್ಮೆಲ್ಲರ ಉಸಿರಾಗಬೇಕೆಂದರು.
ಚಿನಿವಾಲರ, ಪಾಟೀಲ, ಸುಭಾಷ ಏಣಗಿ, ಚೇತನ ಯರಗಟ್ಟಿ ಮುಂತಾದ ಇಂಜನೀಯರು ಮತ್ತು ಸಾಹಿತಿಗಳು ಉಪಸ್ಥಿತರಿದ್ದರು. ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಷಯವನ್ನು ಕೋರಿದರು.

ಮಹಾನಂದಾ ಕರಿಲಿಂಗನವರ, ಡಾ:ಹೇಮಾ ಸೊನೊಳ್ಳಿ, ಶಾಲಿನಿ ಚಿನಿವಾಲರ, ನಿರ್ಮಲಾ ಪಾಟೀಲ, ಶಾಂತಾ ಮಸೂತಿ, ಮುಂತಾದ ಮಹಿಳಾ ಸಾಹಿತಿಗಳು ಆಗಮಿಸಿದ್ದರು.ನಾಡದೇವಿಯ ಪೂಜೆಯೊಂದಿಗೆ ಪ್ರಾರಂಭವಾಗಿ ಕನ್ನಡ ಧ್ವಜಾರೋಹಣವಾದ ನಂತರ ಪ್ರಸಾದ ವಿತರಣೆಯೊಂದಿಗೆ, ಕಾರ್ಯಕ್ರಮವು ಮುಕ್ತಾಯವಾಯಿತು.

Belgavi,karnataka rajyotsava,flag,kannada sahitya parishad

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ