ಕ್ರೂಸರ್ ಹಾಗೂ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ: ಅಂತ್ಯಕ್ರಿಯೆಗೆಂದು ಹೊರಟ ಐವರು ಮಸಣಕ್ಕೆ

ಬೆಳಗಾವಿ:ಫೆ-18: ಕ್ರೂಸರ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾದ ಪರಿಣಾಮ ಸಂಬಂಧಿಯೊರ್ವರ ಅಂತ್ಯಕ್ರಿಯೆಗೆಂದು ಸಾಗಿದ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಥಣಿ ಗುಡ್ಡಾಪುರ ರಸ್ತೆಯ ಅಡ್ಡಹಳ್ಳಿ ಎಂಬಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಕ್ರೂಸರ್‌ನಲ್ಲಿದ್ದ 9 ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ದುರ್‌ದೈವಿಗಳು ಅಥಣಿಯ ಕಕಮರಿಯ ಗೌರವ್ವ ಜಾಧವ್(75) ,ಅಣ್ಣಪ್ಪ ಜಾಧವ್(40), ಅರ್ಚನಾ ಜಾಧವ್(35), ರಾಧಮ್ಮ ಜಾಧವ್(55), ರವಿ ಜಾಧವ್(12) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರೆಂದು ತಿಳಿದುಬಂದಿದೆ. ಐಗಳಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Accident,Athani,Belagavi,Spot Death

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ