ರೈತರಿಗೆ ಕೇಂದ್ರ ಭರ್ಜರಿ ಗಿಫ್ಟ್ | ಬ್ಯಾಂಕ್ ಖಾತೆಗೆ ಹಣ ಕಬ್ಬು ಬೆಳೆಗಾರರಿಗೆ 3,500ಕೋ. ಸಬ್ಸಿಡಿ

ಹೊಸದಿಲ್ಲಿ: ಕಬ್ಬು ಬೆಳೆಗಾರರಿಗೆ ತಾವು ಬೆಳೆದ ಉತ್ಪನ್ನಕ್ಕೆ ಬಾಕಿ ಹಣ ದೊರಕಿಸಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 3,500 ಕೋಟಿ ರೂ. ಸಹಾಯಧನ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಬ್ಬು ಬೆಳೆಗಾರರಿಗೆ ಸರ್ಕಾರ ಸಂತಸದ ಸುದ್ದಿ ನೀಡಿದೆ.
2020-21ನೇ ಹಂಗಾಮಿನಲ್ಲಿ ರಫ್ತು ಮಾಡಲಾಗುತ್ತಿರುವ 60 ಲಕ್ಷ ಟನ್ ಸಕ್ಕರೆಗೆ ಸಬ್ಸಿಡಿ ಘೋಷಿಸಲಾಗುತ್ತಿದ್ದು, ಸಬ್ಸಿಡಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ರೈತರು ತಮ್ಮ ಕಬ್ಬನ್ನು ನೇರವಾಗಿ ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಕ್ಕರೆ ದಾಸ್ತಾನು ಹೆಚ್ಚಿರುವ ಕಾರಣ, ಹಣ ಪಾವತಿ ಮಾಡುತ್ತಿಲ್ಲ. ಇದರಿಂದ ರೈತರಿಗೆ ಬರಬೇಕಾದ ಬಾಕಿ ಹಣ ಬರುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಭಾರತ ಸರ್ಕಾರ ಹೆಚ್ಚುವರಿ ಸಕ್ಕರೆ ದಾಸ್ತಾನನ್ನು ಖಾಲಿ ಮಾಡಲು ನೆರವು ನೀಡುತ್ತಿದೆ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಪಡೆಯುವುದು ಸುಲಭವಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರ ಈ ಉದ್ದೇಶಕ್ಕಾಗಿ 3,500 ಕೋಟಿ ರೂ. ಸಬ್ಸಿಡಿ ಘೋಷಿಸಿದ್ದು, ಈ ಸಹಾಯಧನವನ್ನು ಸಕ್ಕರೆ ಕಾರ್ಖಾನೆಗಳ ಪರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ