ಬಜೆಟ್ ಅವೇಶನ ಆರಂಭ | ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಭಾರತದ ಉನ್ನತ ಭವಿಷ್ಯಕ್ಕಾಗಿ ಬಜೆಟ್

ಹೊಸದಿಲ್ಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಅವೇಶನವನ್ನು ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣದೊಂದಿಗೆ ಆರಂಭಿಸಲಾಗಿದ್ದು, ದೇಶದ ಭದ್ರತೆ, ಆರ್ಥಿಕ ಅಭಿವೃದ್ಧಿ, ಕೃಷಿ ಕಾಯ್ದೆ, ರೈತರ ಕಲ್ಯಾಣ, ಗ್ಯಾಲ್ವಾನ್ ಗಡಿ ಬಿಕ್ಕಟ್ಟು , ರಾಮ ಮಂದಿರ ನಿರ್ಮಾಣ, 370 ವಿ ರದ್ದು, ರಾಷ್ಟ್ರೀಯ ಶಿಕ್ಷಣ ನೀತಿ, ಮಹಿಳಾ ಸಬಲೀಕರಣ ಸೇರಿ ಹಲವು ವಿಚಾರಗಳನ್ನು ಕೋವಿಂದ್ ಪ್ರಸ್ತಾಪಿಸಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದತ್ತ ದೇಶ ಕಾಲಿಡುತ್ತಿದ್ದು, ಪ್ರತಿಯೊಬ್ಬ ದೇಶವಾಸಿಯ ಹಕ್ಕುಗಳನ್ನು ಸಂರಕ್ಷಿಸಲು, ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಬಜೆಟ್ ಅವೇಶನವೂ ಪ್ರಮುಖ ಪಾತ್ರವಹಿಸಲಿದ್ದು, ಕೊರೋನಾಬಿಕ್ಕಟ್ಟಿನಿಂದ ಹೊರಬರುತ್ತಿರುವ ನಮ್ಮೆಲ್ಲರಿಗೂ ಬಜೆಟ್ ಹೊಸ ಭರವಸೆ ಮೂಡಿಸಲಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ