ರಾಮಸೇತು ರಚನೆ ಎಂದು -ಹೇಗೆ ? ಪುರಾತತ್ವ ಇಲಾಖೆ ನಡೆಸಲಿದೆ ಸಂಶೋಧನೆ

ಹೊಸದಿಲ್ಲಿ : ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಮಿಸಲಾದ ತ್ರೇತಾಯುಗದ ಇತಿಹಾಸ ಇರುವ ರಾಮಸೇತು ಎಂದು ಮತ್ತು ಹೇಗೆ ನಿರ್ಮಾಣಗೊಂಡಿತು ಎಂಬ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯ ತಜ್ಞರು ಮತ್ತು ವಿಜ್ಞಾನಿಗಳು ಸಂಶೋಧನೆ ನಡೆಸಲಿದ್ದಾರೆ. ಈ ಮೂಲಕ ಹಿಂದುಗಳ ಶ್ರದ್ಧೆಯ ಸಂಕೇತವಾದ ರಾಮಸೇತುವಿನ ಕುರಿತಂತೆ ಹೊಸ ಬೆಳಕು ಮೂಡುವ ವಿಶ್ವಾಸ ಉಂಟಾಗಿದೆ.
ಈ ಸಂಬಂಧ, ಸಿಎಸ್‍ಐಆರ್-ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಷನೋಗ್ರಫಿ, ಗೋವಾ(ಎನ್‍ಐಒ) ಕಳೆದ ತಿಂಗಳು ಸಲ್ಲಿಸಿದ್ದ ಪ್ರಸ್ತಾವವೊಂದನ್ನು ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ(ಎಎಸ್‍ಐ)ಯ ಅೀನದಲ್ಲಿ ಬರುವ ಪುರಾತತ್ವಶಾಸ್ತ್ರ ಕುರಿತ ಕೇಂದ್ರೀಯ ಸಲಹಾ ಮಂಡಳಿಯು ಅಂಗೀಕರಿಸಿದೆ. ಇದರೊಂದಿಗೆ ಭಾರತ ಮತ್ತು ಶ್ರೀಲಂಕಾ ನಡುವೆ ರಾಮೇಶ್ವರಮ್‍ನಲ್ಲಿರುವ ರಾಮಸೇತುವಿನ ಆಯಸ್ಸನ್ನು ನಿರ್ಧರಿಸುವ ಸಮುದ್ರ ತಳದ ಶೋಧ ಯೋಜನೆಯನ್ನು ಕೈಗೊಳ್ಳಲಿದೆ. ಈ ರಾಮಸೇತುವನ್ನು ಹೇಗೆ ನಿರ್ಮಿಸಲಾಯಿತು ಎಂಬ ಬಗ್ಗೆ ಈ ವರ್ಷವೇ ಈ ಸಂಶೋಧನೆ ಆರಂಭಗೊಳ್ಳಲಿದೆ.ಈ ಯೋಜನೆಯ ಮೇಲೆ ಕೆಲಸ ಮಾಡಲಿರುವ ವಿಜ್ಞಾನಿಗಳು ಹೇಳುವಂತೆ , ಇದರಿಂದ ರಾಮಾಯಣದ ಅವಯನ್ನು ನಿರ್ಧರಿಸಲು ಇದು ನೆರವಾಗಲಿದೆ .
ಭೌಗೋಳಿಕ ಸಮಯ ಮಾಪನಕ್ಕಾಗಿ ಇರುವ ಪುರಾತತ್ವ ವಸ್ತುಗಳು, ರೇಡಿಯೋಮೆಟ್ರಿಕ್ ಮತ್ತು ಥರ್ಮೋಲುಮಿನೆಸೆನ್ಸ್(ಟಿಎಲ್)ಡೇಟಿಂಗ್ ಮತ್ತು ಪೂರಕ ಪಾರಿಸರಿಕ ಅಂಕಿ-ಅಂಶಗಳ ಆಧಾರದಲ್ಲಿ ಈ ಅಧ್ಯಯನವನ್ನು ನಡೆಸಲಾಗುವುದು ಎಂದು ಎನ್‍ಐಒದ ನಿರ್ದೇಶಕ ಪೆÇ್ರ.ಸುನೀಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ರಾಮಸೇತು ಗೂಗಲ್ ಅರ್ಥ್ ಇಮೇಜನ್ನು ಸಿಎಸ್‍ಐಆರ್ ಒದಗಿಸಿದೆ.
ರೇಡಿಯೋಮೆಟ್ರಿಕ್ ತಂತ್ರಜ್ಞಾನವನ್ನು ಒಂದು ರಚನೆಯ ಕಾಲ ನಿರ್ಣಯಕ್ಕೆ ಬಳಸಲಾಗುತ್ತಿದ್ದು, ಇದನ್ನು ಆಧರಿಸಿ ಸರಣಿ ಶಿಲಾ ಮಾದರಿ ರಚನೆಯ ರಾಮಸೇತುವಿನ ಅಧ್ಯಯನ ನಡೆಸಲಾಗುವುದು.ಈ ಶಿಲಾರಚನೆ ಕ್ಯಾಲ್ಸಿಯಂ ಕಾರ್ಬೊನೇಟ್‍ನ್ನು ಒಳಗೊಂಡಿರುವುದರಿಂದ ರಾಮಸೇತುವಿನ ಕಾಲ ನಿರ್ಣಯಕ್ಕೆ ನಮಗೆ ನೆರವಾಗಲಿದೆ. ಇದು ರಾಮಾಯಣದ ಕಾಲವನ್ನು ಅರಿಯಲೂ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.
ವಸ್ತುವೊಂದರ ಕಾಲವನ್ನು ದೃಢಪಡಿಸಲು ವಿಕಿರಣಶೀಲ ಪಳೆಯುಳಿಕೆಗಳನ್ನು ಶಾಖಯುಕ್ತವನ್ನಾಗಿಸಿದಾಗ ಟಿಎಲ್ ಡೇಟಿಂಗ್ ಅಧ್ಯಯನಕ್ಕೆ ನೆರವಾಗುವ ಬೆಳಕನ್ನು ಅದು ಬಿಡುಗಡೆಗೊಳಿಸುತ್ತದೆ.ಭಾರತೀಯರು ರಾಮಾಯಣದಲ್ಲಿ ಶ್ರೀರಾಮ ಸೀತಾಮಾತೆಯನ್ನು ರಕ್ಷಿಸುವುದಕ್ಕಾಗಿ ಲಂಕೆಗೆ ವಾನರಸೇನೆಯ ನೆರವಿನಿಂದ ನಿರ್ಮಿಸಿದ ರಚನೆಯೇ ರಾಮಸೇತುವಾಗಿದ್ದು, 48ಕಿ.ಮೀ.ಉದ್ದದ ಈ ಸುಣ್ಣದ ಕಲ್ಲು ಮಾದರಿಯ ರಚನೆ ವಿಜ್ಞಾನಿಗಳನ್ನೂ ಅಚ್ಚರಿಗೆ ಕೆಡವಿದ ನಿರ್ಮಾಣವಾಗಿದೆ ಎಂಬುದಿಲ್ಲಿ ಉಲ್ಲೇಖನೀಯ. ಈ ಮೂಲಕ ಶ್ರೀರಾಮ ಕೇವಲ ಪೌರಾಣಿಕ ವ್ಯಕ್ತಿಯಲ್ಲ ಬದಲಿಗೆ ಸತ್ಯ ಇತಿಹಾಸ ಪುರುಷ ಎಂಬುದನ್ನು ವ್ಯಕ್ತಗೊಳಿಸುವ ಹಿಂದುಗಳ ಆಶಯಕ್ಕೆ ಬಲಬರುವ ವಿಶ್ವಾಸವಿದೆ.
ತಮಿಳ್ನಾಡಿನ ಧನುಷ್ಕೋಡಿಯಲ್ಲಿರುವ ಈ ರಾಮಸೇತು ನಾಸಾ ಸೇರಿದಂತೆ ಜಾಗತಿಕ ವಿಜ್ಞಾನಿಗಳ ಗಮನವನ್ನೂ ಸೆಳೆದಿದೆ.ಈ ಸಂಶೋಧನೆಗೆ ಸಂಶೋಧನಾ ನೌಕೆಗಳಾದ ಸಿಂಧು ಸಾಧನ ಅಥವಾ ಸಿಂಧು ಸಂಕಲ್ಪ ನೌಕೆಗಳನ್ನು ಎನ್‍ಐಒ ಬಳಸಿಕೊಳ್ಳಲಿದೆ.ಈ ನೌಕೆಗಳು ಜಲಮಟ್ಟದಿಂದ 35-40ಮೀ.ಆಳದಲ್ಲಿನ ಮಡ್ಡಿನ ಮಾದರಿಗಳನ್ನು ಸಂಗ್ರಹಿಸಬಲ್ಲುದು.ಈ ಸಂಶೋಧನೆಯ ಮೇಲ್ವಿಚಾರಣೆಯನ್ನು ಎನ್‍ಐಒದ ಮೆರೈನ್ ಆರ್ಕಿಯಾಲಜಿ ಇಲಾಖೆಯ ಪ್ರಿನ್ಸಿಪಾಲ್ ಟೆಕ್ನಿಕಲ್ ಆಫೀಸರ್ ಆಗಿರುವ ಡಾ.ಸುಂದರೇಶ್ ಒಳಗೊಂಡ ತಂಡವೊಂದು ನೋಡಿಕೊಳ್ಳಲಿದೆ.
ಈಗಾಗಲೇ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಶ್ರೀಕೃಷ್ಣನ ದ್ವಾರಕೆಯನ್ನು ವಿಜ್ಞಾನಿಗಳು ಶೋಸಿದ್ದು, ಇದೀಗ ರಾಮಸೇತು ಸಂಶೋಧನೆ ಭಾರತೀಯರಲ್ಲಿ ಹೊಸ ಪುಳಕಕ್ಕೆ ಕಾರಣವಾಗಿದೆ.
ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ಡಿಎಂಕೆ ನಾಯಕ ಕರುಣಾನಿ, ಎಡಪಂಥೀಯ ಬುದ್ಧಿಜೀವಿಗಳು ರಾಮಸೇತು ಮತ್ತು ರಾಮಾಯಣ ಕುರಿತಂತೆ ಪ್ರಶ್ನೆಗಳನ್ನು ಎತ್ತಿ ಹಿಂದುಗಳ ಭಾವನೆಗೆ ಘಾಸಿಯುಂಟು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.ಇದು ಮಾನವ ನಿರ್ಮಿತ ಎಂಬುದಾಗಿ ಕೆಲವು ಉನ್ನತ ವಿಜ್ಞಾನಿಗಳು ಹೇಳಿದಾಗ , ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಡೆಯಿಂದ ಎಎಸ್‍ಐ ಮೂಲಕ ಇದಕ್ಕೆ ಯಾವುದೇ ಆಧಾರವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಲಾಗಿತ್ತು.ಆದರೆ ಬಳಿಕ ಎಲ್ಲೆಡೆ ಆಕ್ರೋಶ ವ್ಯಕ್ತವಾದಾಗ ಅದನ್ನು ಹಿಂಪಡೆಯಲಾಗಿತ್ತು.ಡಿಎಂಕೆ ನಾಯಕ ದಿ.ಕರುಣಾನಿಯವರು ರಾಮಸೇತು ನಿರ್ಮಿಸಿದ ಶ್ರೀರಾಮ ಎಲ್ಲಿ ಇಂಜಿನಿಯರಿಂಗ್ ಮಾಡಿದ್ದು ಎಂದೂ ಪ್ರಶ್ನಿಸಿದ್ದೂ ಇಲ್ಲಿ ಉಲ್ಲೇಖನೀಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ