ಉತ್ತರ ಪ್ರದೇಶದ ಕಾನೂನು ಕುರಿತು ರಾಜನಾಥ ಸಿಂಗ್ ಹೇಳಿಕೆ ಮದುವೆಗಾಗಿ ಮಾಡುವ ಮತಾಂತರ ಒಪ್ಪಲ್ಲ

ಹೊಸದಿಲ್ಲಿ: ಲವ್‍ಜಿಹಾದ್ ಹಾಗೂ ಬಲವಂತದ ಮತಾಂತರ ವಿರುದ್ಧ ಉತ್ತರ ಪ್ರದೇಶದಲ್ಲಿ ಕಾನೂನು ಜಾರಿಗೆ ತಂದಿರುವ ಬೆನ್ನಲ್ಲೇ, ಮದುವೆಗಾಗಿ ಮತಾಂತರ ಮಾಡುವುದನ್ನು ನಾನು ಸಹ ಒಪ್ಪುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಕಾನೂನು ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮತಾಂತರ ಏಕೆ ಬೇಕು ಎಂಬುದೇ ನನ್ನ ಪ್ರಶ್ನೆಯಾಗಿದೆ. ಸಾಮೂಹಿಕವಾಗಿ ಮತಾಂತರ ಮಾಡುವುದು, ಮದುವೆಗಾಗಿ ಮತಾಂತರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಬೇರೆ ಧರ್ಮದವರನ್ನು ಮದುವೆಯಾಗುವುದಿಲ್ಲ ಎಂಬುದು ನನ್ನ ಗಮನದಲ್ಲಿದೆ. ಒಬ್ಬರಿಗೊಬ್ಬರು ಒಪ್ಪಿ ಮದುವೆಯಾಗುವುದಕ್ಕೂ, ಮದುವೆಯಾಗಬೇಕು ಎಂಬ ಕಾರಣಕ್ಕಾಗಿ ಬಲವಂತವಾಗಿ ಮತಾಂತರ ಮಾಡುವುದಕ್ಕೂ ವ್ಯತ್ಯಾಸವಿದೆ. ಹಾಗಾಗಿ ಬಲವಂತದ ಮತಾಂತರ ಇರಕೂಡದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ಹಾಗೆ ನೋಡಿದರೆ, ಒಬ್ಬ ನಿಜವಾದ ಹಿಂದೂ ಜಾತಿ, ಧರ್ಮ ಹಾಗೂ ಪಂಥಗಳ ಕುರಿತು ಭೇದ-ಭಾವ ತೋರುವುದಿಲ್ಲ. ನಮ್ಮ ಧಾರ್ಮಿಕ ಗ್ರಂಥಗಳು ಸಹ ಇಂತಹ ತಾರತಮ್ಯವನ್ನು ಒಪ್ಪುವುದಿಲ್ಲ. ಅಷ್ಟಕ್ಕೂ ವಸುದೈವ ಕುಟುಂಬಕಂ ಅಂದರೆ, ಇಡೀ ಜಗತ್ತೇ ಒಂದು ಕುಟುಂಬ ಎಂಬ ಸಂದೇಶ ನೀಡಿದ ಏಕೈಕ ದೇಶ ಭಾರತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ತಡೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಾನೂನು ಜಾರಿಗೊಳಿಸಿದ್ದು, ಈಗಾಗಲೇ 50ಕ್ಕೂ ಅಕ ಮಂದಿಯನ್ನು ಬಂಸಲಾಗಿದೆ. ಮಧ್ಯಪ್ರದೇಶದಲ್ಲೂ ಲವ್‍ಜಿಹಾದ್ ತಡೆಗೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ