ಪರಿಹಾರ ಹುಡುಕಿ: ಧರ್ಮೇಂದ್ರ ಆಗ್ರಹ

ಹೊಸದಿಲ್ಲಿ: ಏಕಕಾಲಕ್ಕೆ ಸನ್ನಿ ಡಿಯೋಲ್ ಅವರ ತಂದೆ, ಹಿರಿಯ ನಟ ಧರ್ಮೇಂದ್ರ ಅವರು ಕೂಡ ರೈತರ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ಹುಡುಕುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಇದೇ ವಿಚಾರವಾಗಿ ಗುರುವಾರ ಟ್ವಿಟರ್‍ನಲ್ಲಿ ಹಾಕಿದ್ದ ಪೊಸ್ಟ್‍ನ್ನು ಅಳಿಸಿದ ಮರುದಿನವೇ ಧರ್ಮೇಂದ್ರ ಮೇಲಿನಂತೆ ಆಗ್ರಹ ಮಂಡಿಸಿದ್ದಾರೆ.
ದಿಲ್ಲಿಯಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವುದು ನೋವಿನ ವಿಚಾರ.ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳಿಗೆ ಕೇಂದ್ರ ಸರಕಾರ ಆದಷ್ಟು ಶೀಘ್ರ ಸ್ಪಂದಿಸಬೇಕೆಂದು ಧರ್ಮೇಂದ್ರ ಗುರುವಾರ ಟ್ವಿಟರ್‍ನಲ್ಲಿ ಸಂದೇಶ  ಮಾಡಿದ್ದರು. ನಂತರ ತಕ್ಷಣವೇ ಈ ಪೊಸ್ಟ್‍ನ್ನು ಅಳಿಸಿಹಾಕಿದ್ದರು.
ಕಾಯಿದೆಯ ಯಾವ
ವಿಯಿಂದ ಸಮಸ್ಯೆ …
ರೈತರನ್ನು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಬಿಡುಗಡೆ ಮಾಡುವುದು ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಪ್ರದೇಶದಲ್ಲಿ ನೇರ ಮಾರಾಟ ಮಾಡಲು ಅವಕಾಶವೀಯುವ ಅಥವಾ ಕೃಷಿಕ ಸಂಕುಲವನ್ನು ಸಖತ್ ಸ್ವಾವಲಂಬಿಗಳಾಗಿ ರೂಪಿಸುವ ನಿಟ್ಟಿನಲ್ಲಿ, ಕೇಂದ್ರ ಸರಕಾರ ಸೆಪ್ಟೆಂಬರ್‍ನಲ್ಲಿ ಜಾರಿಗೊಳಿಸಿರುವ ಕೃಷಿಕರ ಪರ ಮೂರು ಮಹತ್ತ್ವದ ಕಾಯಿದೆಗಳ ರದ್ದತಿ ಆಗ್ರಹಿಸಿ ರೈತರು ಕಳೆದ 11ದಿನಗಳಿಂದ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನಾ ನಿರತರಾಗಿದ್ದಾರೆ. ರೈತರೊಂದಿಗೆ ಸರಕಾರ ಈಗಾಗಲೆ ಡಿ.1ರಂದು ಒಂದು ಸುತ್ತಿನ ಮಾತುಕತೆ ನಡೆಸಿದೆ. ರೈತರ ಸಮಸ್ಯೆಗಳ ಪರಾಮರ್ಶೆಗೆ ಸಮಿತಿಯೊಂದನ್ನು ರಚಿಸುವ ಸರಕಾರದ ಸಲಹೆಗೆ ರೈತ ಮುಖಂಡರು ಒಪ್ಪದ ಕಾರಣ ಮಾತುಕತೆ ಮುರಿದು ಬಿದ್ದಿತ್ತು. ಮುಂದಿನ ಸುತ್ತಿನ ಮಾತುಕತೆ ಡಿ. 9ರಂದು ನಡೆಯಲಿದೆ. ಕೃಷಿಕರ ಪರ ಹೊಸ ಕಾಯಿದೆಗಳ ರದ್ದತಿಗೆ ಕೇಂದ್ರ ಸರಕಾರ ನಿರಾಕರಿಸಿದೆ ಮತ್ತು ಹೊಸ ಕಾಯಿದೆಗಳ ಯಾವ ವಿಗಳಿಂದ ರೈತರಿಗೆ ಯಾವ ತೆರ ಸಮಸ್ಯೆಯಾಗುತ್ತದೆ ಎಂಬ ವಿವರವನ್ನು ಮುಂದಿನ ಮಾತುಕತೆ ವೇಳೆ ಮಂಡಿಸುವಂತೆ ರೈತ ಮುಖಂಡರಿಗೆ ಸೂಚಿಸಿತ್ತು.
ಹೊಸ ಕಾಯಿದೆಗಳಿಂದ, ತಮ್ಮ ಸುರಕ್ಷೆಯ ಅಂಶವಾಗಿರುವ ಕನಿಷ್ಠ ಬೆಂಬಲ ಬೆಲೆ ಮತ್ತು ಪೊಕ್ಯೂರ್‍ಮೆಂಟ್ ವ್ಯವಸ್ಥೆಗೆ ಹಾನಿಯಾದೀತೆಂಬುದು ರೈತರ ಆತಂಕ. ಹಾಗಾಗೇ ಸಂಸತ್ತಿನ ವಿಶೇಷ ಅವೇಶನ ಕರೆದು ಹೊಸ ಕೃಷಿ ಕಾಯಿದೆಗಳನ್ನು ಕೈಬಿಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮಂಡಿ ವ್ಯವಸ್ಥೆ ಬೇಕೆಂಬುದು ರೈತರ ಇನ್ನೊಂದು ಆಗ್ರಹ. ಆದರೆ ಮಹಾರಾಷ್ಟ್ರದಲ್ಲಿ, ಕೇಂದ್ರದ ಹೊಸ ಕೃಷಿ ಪರ ಕಾಯಿದೆಗಳನ್ವಯ ಮಂಡಿಗಳಿಂದ ಹೊರಗಡೆ ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಿದ ರೈತರಿಗೆ ಸಖತ್ ಲಾಭವಾಗಿದೆ ಎಂಬುದು ಗಮನಾರ್ಹ. ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾಯಿದೆಗಳು ರೈತಾಪಿ ವರ್ಗಕ್ಕೆ ತುಂಬು ಪೂರಕವಾಗಿವೆ ಎಂಬುದಕ್ಕೆ ಇದು ಜ್ವಲಂತ ನಿದರ್ಶನ.

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ