ಮೇಲ್ಮನೆಯಲ್ಲಿ ಬಿಜೆಪಿ ಬಲ 92ಕ್ಕೆ, ಕೈ ಬಲ 41ಕ್ಕೆ ಕುಸಿತ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ತೆರವಾಗಿರುವ 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನವನ್ನು ಅವಿರೋಧವಾಗಿ ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷದ ಬಲ 92ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶದಿಂದ ಖಾಲಿಯಾಗಿದ್ದ 10 ಮತ್ತು ಉತ್ತರಾಖಂಡದಲ್ಲಿ ತೆರವಾಗಿದ್ದ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಉತ್ತರ ಪ್ರದೇಶದಲ್ಲಿ ಎರಡನೇ ಅತಿದೊಡ್ಡ ಪಕ್ಷವಾದ ಸಮಾಜವಾದಿ ಪಕ್ಷವು 1 ಸ್ಥಾನವನ್ನು ಮತ್ತು ಬಿಎಸ್‍ಪಿ 1 ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ. ಇದೇ ವೇಳೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೇಲ್ಮನೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್‍ನ ಬಲ 40ಕ್ಕೆ ಇಳಿದಿದೆ. ಆದರೂ, ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿರಲಿದೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 304 ಸದಸ್ಯರನ್ನು ಹೊಂದಿದ್ದು, ರಾಜ್ಯದಿಂದ ರಾಜ್ಯಸಭೆಯಲ್ಲಿ ಖಾಲಿ ಇರುವ 10 ಸೀಟುಗಳಲ್ಲಿ 8 ಸೀಟುಗಳನ್ನು ಅವಿರೋಧವಾಗಿ ಗೆಲುವು ಸಾಸಿದೆ. ಇನ್ನು ಗುಡ್ಡಗಾಡು ರಾಜ್ಯವಾದ ಉತ್ತರಾಖಂಡ ವಿಧಾನಸಭೆಯಲ್ಲಿಯೂ ಬಹುಮತವಿರುವ ಬಿಜೆಪಿಯೇ ಖಾಲಿ ಇರುವ ಒಂದು ಸೀಟನ್ನು ಅವಿರೋಧವಾಗಿ ಜಯಿಸಿದೆÉ. ಆ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 92ಕ್ಕೆ ಏರಿಕೆಯಾಗುವುದರೊಂದಿಗೆ ಎನ್‍ಡಿಎ ಬಲ 112ಕ್ಕೆ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ