147 ಜಿಲ್ಲೆಯಲ್ಲಿ ವಾರದಿಂದ ಸೋಂಕು ಪತ್ತೆಇಲ್ಲ

ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಈಗಾಗಲೇ ಭಾಗಶಃ ವಿಜಯಗಳಿಸಿದ್ದು,ದೇಶದ 147ಜಿಲ್ಲೆಗಳಲ್ಲಿ ಕಳೆದ 7 ದಿನದಿಂದ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಗುರುವಾರ ತಿಳಿಸಿದ್ದಾರೆ.
ಉನ್ನತ ಮಟ್ಟದ ಸಚಿವ ಸಮೂಹದ 23ನೇ ಸಭೆಯಲ್ಲಿ ಸಚಿವರು ಈ ವಿಚಾರ ಪ್ರಸ್ತಾಪಿಸಿದ್ದು,18ಜಿಲ್ಲೆಗಳಲ್ಲಿ ಕಳೆದ 14ದಿನದಿಂದ, 6ಜಿಲ್ಲೆಗಳಲ್ಲಿ ಕಳೆದ 21 ದಿನದಿಂದ, 21ಜಿಲ್ಲೆಯಲ್ಲಿ ಕಳೆದ 28ದಿನಗಳಿಂದ ಸೋಂಕು ದೃಢಪಟ್ಟಿಲ್ಲ ಎಂದಿದ್ದಾರೆ.
ಅಲ್ಲದೆ, ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶದ ಕಾರ್ಯಕ್ಷಮತೆ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದು,ಅತಿ ಕಡಿಮೆ ಸಾವು ದಾಖಲಿಸಿದ ರಾಷ್ಟ್ರವಾಗಿ ಭಾರತ ಮುಂದುವರಿದಿದ್ದು ಚೇತರಿಕೆ ಹೆಚ್ಚಳದ ಜತೆಗೆ ಗುಣುಮುಖರ ಪ್ರಮಾಣ ಶೇ.97ಕ್ಕೆ ಏರಿಕೆಯಾಗಿದೆ ಎಂದೂ ಹೇಳಿದ್ದಾರೆ.
ದಿನಂಪ್ರತಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದ ಪ್ರಸಕ್ತ ದೇಶದಲ್ಲಿ 15,473 ಮೀಸಲು ಆಸ್ಪತ್ರೆಗಳು, ಆರೋಗ್ಯಕೇಂದ್ರಗಳು ಹಾಗೂ ಕೊರೋನಾ ಕೇಂದ್ರಗಳಲ್ಲಿ 19,00,714 ಹಾಸಿಗೆಗಳಿವೆ ಜತೆಗೆ 12,673 ಕ್ವಾರಂಟೈನ್ ಕೇಂಂದ್ರಗಳಿಗೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ