ಬಂದ್ 11ರಿಂದ 3 ಗಂಟೆತನಕ: ಟಿಕಾಯತ್

ಹೊಸದಿಲ್ಲಿ: ರೈತರು ಕರೆ ನೀಡಿರುವ ಭಾರತ್ ಬಂದ್‍ಗೆ 11 ಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಧ್ಯಂತರ ಮುಖ್ಯಸ್ಥೆ ಸೋನಿಯಾ ಗಾಂ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಎಂಕೆಯ ಎಂ.ಕೆ. ಸ್ಟಾಲಿನ್, ಎಡಪಕ್ಷಗಳ ಸೀತಾರಾಂ ಯೆಚೂರಿ ಮತ್ತು ಡಿ. ರಾಜಾ ಬಂದ್‍ಗೆ ಬೆಂಬಲ ನೀಡಿದ್ದಾರೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ, ಶಿವಸೇನೆ, ಆಮ್ ಆದ್ಮಿ ಪಕ್ಷ ಸಹ ರೈತರ ಬೆಂಬಲಕ್ಕೆ ನಿಂತಿವೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಪ್ರತಿಭಟನಾನಿರತ ರೈತರ ಪರವಾಗಿದ್ದರೂ ಪಶ್ಚಿಮ ಬಂಗಾಳದಲ್ಲಿ ಬಂದ್‍ನ್ನು ಬೆಂಬಲಿಸದಿರಲು ನಿರ್ಧರಿಸಿದೆ. ಬಂದ್ ನಮ್ಮ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟಿಎಂಸಿ ಸಂಸತ್ ಸದಸ್ಯ ಸುಗಾತ ರಾಯ್ ಹೇಳಿದ್ದಾರೆ.
ಬಂದ್ ಬೆಳಗ್ಗಿನಿಂದ ಸಂಜೆ ತನಕವೊ ಅಥವಾ ರಾತ್ರಿಯವರೆಗೊ? ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಸೋಮವಾರ ಹೇಳಿದ್ದು ಹೀಗೆ- ಬಂದ್ ಮೂಲಕ ಜನಸಾಮಾನ್ಯ ತೊಂದರೆ ನೀಡುವುದು ರೈತರ ಉದ್ದೇಶವಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಮೂರರ ತನಕ ಬಂದ್ ನಡೆಸಲಾಗುವುದು. ಹೀಗಾಗಿ ಕಚೇರಿಗೆ ಹೋಗುವವರಿಗೆ ತೊಂದರೆಯಾಗದು. ತುರ್ತು ಸೇವೆ ಮತ್ತು ಮದುವೆ, ಇತರ ಕೌಟುಂಬಿಕ ಕಾರ್ಯಕ್ರಮಗಳಿಗೆ ತೊಂದರೆ ಮಾಡುವುದಿಲ್ಲ. ಈ ಬಂದ್ ಹೊಸ ಕೃಷಿ ಕಾಯ್ದೆಗಳಿಗೆ ನಮ್ಮ ಸಾಂಕೇತಿಕ ಪ್ರತಿಭಟನೆಯಷ್ಟೇ. ಸರ್ಕಾರ ಜಾರಿಗೊಳಿಸಿದ ಮೂರು ಕಾಯ್ದೆಗಳಿಗೆ ನಮ್ಮ ಬೆಂಬಲ ಇಲ್ಲ ಎಂಬುದನ್ನು ಸೂಚಿಸುವ ಕ್ರಮ ಭಾರತ್ ಬಂದ್ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು ವಿರೋಸಿ ರೈತರು ಡಿ.8ರಂದು ಭಾರತ್ ಬಂದ್ ನಡೆಸುತ್ತಿದ್ದಾರೆ. ಡಿ.9ರಂದು ರೈತರು ಮತ್ತು ಸರ್ಕಾರದ ನಡುವೆ ಆರನೇ ಸುತ್ತಿನ ಮಾತುಕತೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ