ಹೊಸದಿಲ್ಲಿ:ದೇಶದಲ್ಲಿ ಸಕ್ರಿಯ ಸೋಂಕಿತರಿಗಿಂತ ಚೇತರಿಕೆ ಹೊಂದುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 49,082 ಮಂದಿ ಗುಣಮುಖರಾಗಿದ್ದಾರೆ.
ಇದೇ ಅವಯಲ್ಲಿ 65,674 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು,559 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಆದಾಗ್ಯೂ ಶನಿವಾರ ದಾಖಲಾದ ಹೊಸ ಸೋಂಕಿತರ ಸಂಖ್ಯೆ 50,336 ಆಗಿದ್ದು, ಭಾನುವಾರ ಈ ಸಂಖ್ಯೆ ಶೇ.9 ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯಾಕಾರಿಗಳು ಹೇಳಿದ್ದಾರೆ.