ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್‍ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ

ಹೈದರಾಬಾದ್, ಜು.27- ಭಾರತ್ ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್‍ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ. ಜೊತೆಗೆ ಭಾರತ್ ಬಯೋಟೆಕ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾದ ಒಪ್ಪಂದವನ್ನು ರದ್ದು ಪಡಿದೆ.

ಬ್ರಿಜಿಲ್‍ನ ರಾಷ್ಟ್ರೀಯ ಆರೋಗ್ಯ ನಿಗಾವಣಾ ಸಂಸ್ಥೆ ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದ್ದು, ಲಸಿಕೆ ಬಳಕೆಯ ತಾತ್ಕಾಲಿಕ ಅನುಮತಿಯನ್ನು ರದ್ದು ಮಾಡಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಜೊತೆ ಬ್ರೆಜಿಲ್‍ನ ಅನ್‍ವಿಶಾದ್ ವಿದೇಶಿ ಪಾಲುದಾರಿಕೆ ಸಂಸ್ಥೆಯಾಗಿದ್ದು, ಅದಕ್ಕೆ ಪೂರ್ವ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಕೋವ್ಯಾಕ್ಸಿನ್ ಬೇರೆ ಲಸಿಕೆಯ ತದ್ರೂಪ ಅಂಶಗಳನ್ನು ಹೊಂದಿದ ಆರೋಪ ಎದುರಿಸುತ್ತಿದೆ. ಒಪ್ಪಂದದ ಪ್ರಕಾರ ಭಾರತ್ ಬಯೋಟೆಕ್ 20 ದಶಲಕ್ಷ ಲಸಿಕೆಗಳನ್ನು ಕಳಹಿಸಿತ್ತು.

ಅದು ಬ್ರೆಜಿಲ್ ತಲುಪಿದ ಬಳಿಕ ಅಲ್ಲಿನ ಸರ್ಕಾರ ಒಪ್ಪಂದವನ್ನು ರದ್ದು ಮಾಡಿದೆ. ಸ್ಥಳೀಯ ಪಾಲುದಾರ ಕಂಪೆನಿ ಅನ್‍ವಿಶಾದ್ ಕೂಡ ಒಪ್ಪಂದದ ಅಂಶಗಳನ್ನು ಉಲ್ಲಂಘಿಸಿದೆ ಎಂದು ಬ್ರೆಜಿಲ್ ಸರ್ಕಾರ ಆರೋಪಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ