ಎಲ್‍ಎಸಿಯಲ್ಲಿ ಸಂಯಮ: ಚೀನಾ- ಭಾರತ ಒಪ್ಪಿಗೆ

ಹೊಸದಿಲ್ಲಿ: ಇತ್ತೀಚೆಗಷ್ಟೇ ಲಡಾಖ್ ಗಡಿ ಬಿಕ್ಕಟ್ಟು ಸಂಬಂಧ ಭಾರತ- ಚೀನಾ ನಡುವೆ ನಡೆದ 8ನೇ ಸುತ್ತಿನ ಮಿಲಿಟರಿ ಹಂತದ ಸಭೆಯಲ್ಲಿ, ಎರಡು ರಾಷ್ಟ್ರದ ಸೇನಾ ಪಡೆಗಳು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‍ಎಸಿ) ಸಂಯಮ ಕಾಪಾಡಿಕೊಳ್ಳಲು, ಎಲ್‍ಎಸಿ ಕುರಿತಂತೆ ಯಾವುದೇ ತಪ್ಪು ತಿಳಿವಳಿಕೆ ಹೊಂದದಿರಲು ಒಪ್ಪಿವೆ ಎಂದು ತಿಳಿದುಬಂದಿದೆ.
ಜತೆಗೆ ಎಲ್‍ಎಸಿ ಯುದ್ಧಕ್ಕೂ ಎರಡು ರಾಷ್ಟ್ರಗಳು ನಿಯೋಜಿಸಿರುವ ಹೆಚ್ಚುವರಿ ಸೇನೆಯನ್ನು ಹಿಂಪಡೆಯುವ ಬಗ್ಗೆಯೂ ದೀರ್ಘಾವ ಮಾತುಕತೆ ನಡೆಸಿವೆ ಎಂದು ಮಾಹಿತಿ ದೊರೆತಿದೆ.
ಗಡಿಯಲ್ಲಿ ಶಾಂತಿ ಕಾಪಾಡಲು ಉಭಯ ರಾಷ್ಟ್ರಗಳ ನಾಯಕರು ತೆಗೆದುಕೊಳ್ಳುವ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಸೇನಾ ಪಡೆಗಳು ಒಪ್ಪಿದ್ದು, ಮುಂಚೂಣಿಯಲ್ಲಿ ನಿಯೋಜಿಸಲಾಗಿರುವ ಯೋಧರು ಸಂಯಮ ಕಾಪಾಡಿಕೊಳ್ಳಲು ಸಮ್ಮತಿ ನೀಡಿವೆ. ಜತೆಗೆ ಶಾಂತಿ ಕಾಯ್ದಿರಿಸಿಕೊಳ್ಳಲು ಮಿಲಿಟರಿ ಹಾಗೂ ರಾಜಕಾಂತ್ರಿಕ ಮಾರ್ಗಗಳ ಮೂಲಕ ಸಭೆ ನಡೆಸಲೂ ತೀರ್ಮಾನಿಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ