ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ಪೂರ್ಣಗೊಂಡಿದ್ದು, ಇದೀಗ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಟ್ ಅಭ್ಯರ್ಥಿ ಜೋ ಬಿಡನ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಕೋವಿಡ್-19 ಸೋಂಕಿನ ನಡುವೆ ನಡೆದ ಅತ್ಯಂತ ದೊಡ್ಡ ಚುನಾವಣೆ ಇದಾಗಿದ್ದು, 74 ವರ್ಷದ ಡೋನಾಲ್ಡ್ ಟ್ರಂಪ್ ಹಾಗೂ 77 ವರ್ಷದ ಜೋ ಬಿಡನ್ ಭಾರೀ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಇಬ್ಬರು ನಾಯಕರ ನೀತಿ-ನಿಲುವುಗಳು ವಿಭಿನ್ನವಾಗಿದ್ದು, ಚುನಾವಣಾ ಪ್ರಚಾರದಲ್ಲೂ ಬಹಿರಂಗಗೊಂಡಿತ್ತು. ಇವರ ಗೆಲುವಿನ ಬಗ್ಗೆ ವಿವಿಧ ಮಾಧ್ಯಮಗಳ ಸಮೀಕ್ಷೆಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಡೋನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ತಮ್ಮದೇ ಗೆಲುವು ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ದೊಡ್ಡ ರಾಜ್ಯಗಳಾದ ಪ್ಲೋರಿಡಾ ಮತ್ತು ಅರಿಜೋನಾದಲ್ಲಿ ತಮಗೆ ಗೆಲುವು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೋ ಬಿಡನ್, ಮಧ್ಯಮ ವರ್ಗದ ಜನ ರಾಷ್ಟ್ರ ನಿರ್ಮಾಣ ಮಾಡಿದ್ದು, ಅವರೇ ದೇಶದ ಬೆನ್ನಲುಬು. ತಮ್ಮನ್ನು ಎಲ್ಲರೂ ಬೆಂಬಲಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Related Articles
ಸೆಪ್ಟೆಂಬರ್ನಿಂದ ಸ್ಪುಟ್ನಿಕ್ ಉತ್ಪಾದನೆ ಆರಂಭ
July 13, 2021
Varta Mitra News - SP
ರಾಷ್ಟ್ರೀಯ
Comments Off on ಸೆಪ್ಟೆಂಬರ್ನಿಂದ ಸ್ಪುಟ್ನಿಕ್ ಉತ್ಪಾದನೆ ಆರಂಭ
Seen By: 47 ಹೊಸದಿಲ್ಲಿ: ದೇಶದಲ್ಲಿ ಕೊರೋನಾ ವಿರುದ್ಧದ ಲಸಿಕೆಗಳನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಬೆನ್ನಲ್ಲೇ, ರಷ್ಯಾ ನಿರ್ಮಿತ ಸ್ಪುಟ್ನಿಕ್-5 ಲಸಿಕೆಯನ್ನು ಸೆಪ್ಟೆಂಬರ್ನಿಂದ ಪುಣೆ ಮೂಲದ ಲಸಿಕೆ [more]
ಪಾಕ್ ಮತಾಂಧರಿಗೆ ಪೊಲಿಯೋ ಲಸಿಕೆಯೂ ಬೇಡ, ಕೋವಿಡ್ ಲಸಿಕೆಗೂ ಅಡ್ಡಗಾಲು : ಬಡವರಿಲ್ಲಿ ಹೈರಾಣ
December 30, 2020
Varta Mitra News - SP
ರಾಷ್ಟ್ರೀಯ, ಆರೋಗ್ಯ, ಅಂತರರಾಷ್ಟ್ರೀಯ
Comments Off on ಪಾಕ್ ಮತಾಂಧರಿಗೆ ಪೊಲಿಯೋ ಲಸಿಕೆಯೂ ಬೇಡ, ಕೋವಿಡ್ ಲಸಿಕೆಗೂ ಅಡ್ಡಗಾಲು : ಬಡವರಿಲ್ಲಿ ಹೈರಾಣ
Seen By: 87 ಡರ್ ಮಾಂಗಿ , ಪಾಕಿಸ್ಥಾನ : ಮತಾಂಧರ ದೃಷ್ಟಿ ಸದಾ ಪೀತ. ಒಳ್ಳೆಯ ವಿಚಾರಗಳೂ ಇವರಿಗೆ ಕೆಟ್ಟದಾಗೇ ಗೋಚರಿಸುವುದು. ಮಾರಕ ಕೋವಿಡ್ ಲಕ್ಷಾಂತರ [more]
ದೇಶದ 40ಕೋಟಿ ಜನರಿನ್ನೂ ಕೋವಿಡ್ ಅಪಾಯಕ್ಕೆ ಸಿಲುಕುವ ಆತಂಕದಲ್ಲಿ :ಸಮೀಕ್ಷೆ
July 20, 2021
Varta Mitra News - SP
ರಾಷ್ಟ್ರೀಯ
Comments Off on ದೇಶದ 40ಕೋಟಿ ಜನರಿನ್ನೂ ಕೋವಿಡ್ ಅಪಾಯಕ್ಕೆ ಸಿಲುಕುವ ಆತಂಕದಲ್ಲಿ :ಸಮೀಕ್ಷೆ
Seen By: 86 ಹೊಸದಿಲ್ಲಿ :ದೇಶದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಜನರು ಇನ್ನೂ ಕೋವಿಡ್-19ಸೋಂಕಿನ ಅಪಾಯಕ್ಕೆ [more]