ಉಪಚುನಾವಣೆ: ಮತ ಎಣಿಕೆ ಆರಂಭ

ಬೆಂಗಳೂರು: ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಲಲಾಗುತ್ತಿರುವ 5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಐದು ಕ್ಷೇತ್ರದಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಮಧ್ಯಾಹ್ನದೊಳಗೆ ಫಲಿತಾಂಶದ ಸಂಪೂರ್ಣ ಚಿತ್ರಣ ಹೊರಬೀಳಲಿದೆ.

ಮಂಡ್ಯ, ಬಳ್ಳಾರಿ, ಜಮಖಂಡಿ, ಶಿವಮೊಗ್ಗ, ರಾಮನಗರ ಕ್ಷೇತ್ರಗಳಲ್ಲಿ ನ.3ರಂದು ಉಪಚುನಾವಣೆ ನಡೆದಿತ್ತು. ಬಿ.ಎಸ್​.ಯಡಿಯೂರಪ್ಪ, ಎಚ್​.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್​ ಮತ್ತಿತರ ಪ್ರಮುಖ ನಾಯಕರಿಗೆ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಮೈತ್ರಿ ಸರ್ಕಾರದ ಮುಖಂಡರಿಗೆ ಸರ್ಕಾರ ಉಳಿಸಿಕೊಳ್ಳುವ ಸವಾಲಾದರೆ, ಬಿಜೆಪಿ ನಾಯಕರು ಸರ್ಕಾರ ಉರುಳಿಸುವ ಆಶಯದಲ್ಲಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ರಾಮನಗರದಲ್ಲಿ ಚನಾವಣೆ ಪೂರ್ವದಲ್ಲೇ ಅಭ್ಯರ್ಥಿಯ ಪಕ್ಷಾಂತರದಿಂದ ಬಿಜೆಪಿ ಮುಖಭಂಗ ಅನುಭವಿಸಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಗೆಲುವು ಅನಾಯಾಸವಾಗಿ ಒಲಿದುಬರಲಿದೆ.

Karnataka, By-Election Results

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ