ಉಪಚುನಾವಣೆ ಮತ ಎಣಿಕೆ ಅಂಕಿ-ಅಂಶ

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು ಭರದಿಂದ ಸಾಗಿದೆ.

ಕಾಂಗ್ರೆಸ್​ ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ಬಿಜೆಪಿ ವಿರುದ್ಧ ಭಾರಿ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ರಾಮನಗರ, ಮಂಡ್ಯದಲ್ಲಿ ಜೆಡಿಎಸ್​ ಅತ್ಯಂತ ದೊಡ್ಡ ಮತಗಳ ಅಂತರ ಸಾಧಿಸಿದೆ. ಇನ್ನು ಬಳ್ಳಾರಿಯಲ್ಲಿಯೂ ಕಾಂಗ್ರೆಸ್​ ಭಾರಿ ಮತಗಳನ್ನು ಗಳಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ದೊಡ್ಡ ಅಂತರ ಕಾಯ್ದುಕೊಂಡಿದೆ. ಜಮಖಂಡಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಸಾಧಿಸಿದೆ.

ಇನ್ನು ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಜೆಡಿಎಸ್​ ನಡುವೆ ತುರುಸಿನ ಪೈಪೋಟಿ ನಡೆಯುತ್ತಿದೆ. ಆದರೂ, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ಮತಗಳ ಅಂತರ ಕ್ಷಣ ಕ್ಷಣವೂ ಹೆಚ್ಚುತ್ತಿದೆ.

ಈ ಬಾರಿಯ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮತದಾರರು ನೋಟಾ ಗೆ ಪ್ರಾಮುಖ್ಯತೆ ನೀಡಿದ್ದು, ಅದು ಕೂಡ ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸುತ್ತಿದೆ.

ಸಧ್ಯದ ಮಾಹಿತಿ ಪ್ರಕಾರ:

ರಾಮನಗರ- ಜಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ‌ 27,998 ಮುನ್ನಡೆ
ಜೆಡಿಎಸ್​- 33,859
ಬಿಜೆಪಿ – 5861
ಜಮಖಂಡಿ- ಕಾಂಗ್ರೆಸ್​ ಅಭ್ಯರ್ಥಿ ಆನಂದ ನ್ಯಾಮಗೌಡ 12792 ಮುನ್ನಡೆ
ಕಾಂಗ್ರೆಸ್​- 35218
ಬಿಜೆಪಿ – 22427
ಮಂಡ್ಯ- ಜೆಡಿಎಸ್​ ಅಭ್ಯರ್ಥಿ ಶಿವರಾಮೇಗೌಡ 109066 ಮತಗಳ ಭಾರಿ ಮುನ್ನಡೆ
ಜೆಡಿಎಸ್- 173290
‘ಬಿಜೆಪಿ – 64224
ಬಳ್ಳಾರಿ- ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ 64000 ಮತಗಳಿಂದ ಮುನ್ನಡೆ
ಕಾಂಗ್ರೆಸ್​- 150948
ಬಿಜೆಪಿ -86948
ಶಿವಮೊಗ್ಗ- ಬಿಜೆಪಿ ಅಭ್ಯರ್ಥಿ ರಾಘವೇಂದ್ರ 13481 ಮತಗಳ ಮುನ್ನಡೆ
ಬಿಜೆಪಿ – 144856
ಜೆಡಿಎಸ್​- 128973

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ