ಲೋಕ ಸಮರ: ರಾಜ್ಯದಲ್ಲಿ ಮೊದಲ ಹಂತದ ಮತದಾನ ಆರಂಭ

ಬೆಂಗಳೂರು: ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಸೇರಿ ದೇಶದ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗಿದೆ. ಮುಂಜಾನೆ 7 ಗಂಟೆಯಿಂದಲೇ ಆರಂಭವಾಗಿರುವ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸಂಜೆ 6ಗಂಟೆ ವರೆಗೆ ಚುನಾವಣೆ ನಡೆಯಲಿದೆ.

ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿರುವ 241 ಅಭ್ಯರ್ಥಿಗಳ ಹಣೆಬರಹವನ್ನು 2.67 ಕೋಟಿ ಮತದಾರರು ನಿರ್ಣಯಿಸಲಿದ್ದಾರೆ.

ಮೊದಲ ಹಂತದಲ್ಲಿ ತುಮಕೂರು, ಮಂಡ್ಯ, ಹಾಸನ, ಬೆಂಗಳೂರು ಉತ್ತರದಂತಹ ಹೈ ವೋಲ್ಟೆಜ್ ಕ್ಷೇತ್ರಗಳಿವೆ. ಈ ಕ್ಷೇತ್ರಗಳ ಫಲಿತಾಂಶ ಹಲವು ಗಣ್ಯರ ಹಣೆಬರಹ ನಿರ್ಧರಿಸಲಿದೆ. ಉಡುಪಿ-ಚಿಕ್ಕಮಗಳೂರು 1837, ಹಾಸನ 2235, ದಕ್ಷಿಣ ಕನ್ನಡ 1861, ಚಿಕ್ಕೋಡಿ 2161, ತುಮಕೂರು 1907, ಮಂಡ್ಯ 2046, ಮೈಸೂರು 2187, ಚಾಮರಾಜನಗರ 2005, ಬೆಂಗಳೂರು ಗ್ರಾಮಾಂತರ 2672, ಬೆಂಗಳೂರು ಉತ್ತರ 2656, ಬೆಂಗಳೂರು ಕೇಂದ್ರ 2082, ಬೆಂಗಳೂರು ದಕ್ಷಿಣ 2131, ಚಿಕ್ಕಬಳ್ಳಾಪುರ 2284, ಕೋಲಾರ 2100 ಸೇರಿದಂತೆ ಒಟ್ಟು 30164 ಮತಗಟ್ಟೆಗಳಿವೆ.

ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ಇವಿಎಂ, ವಿವಿಪ್ಯಾಟ್‍ಗಳ ಅಳವಡಿಕೆ, ಭದ್ರತೆಯ ಸಿದ್ಧತೆಯೂ ನಡೆದಿದೆ. 14 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 4ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಈ 14 ಕ್ಷೇತ್ರಗಳ ಪೈಕಿ ಮಂಡ್ಯ ಕಣ ಅತ್ಯಂತ ಹೈವೋಲ್ಟೇಜ್ ಕಣವೆನಿಸಿದೆ.

ಮತದಾನದ ಕೇಂದ್ರದ ಸುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೊಷಿಸಲಾಗಿದೆ; ಪೊಲೀಸ್, ಸಿಆರ್​ಪಿಎಫ್ ಸೇರಿದಂತೆ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಮತದಾನ ಕೇಂದ್ರದಲ್ಲಿ 1,54,262 ಜನ ಕಾರ್ಯ ನಿರ್ವಹಿಸಲಿದ್ದಾರೆ. ಮತದಾನಗಳ ಕೇಂದ್ರದ ಸುತ್ತ 38,597 ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇನ್ನುಳಿದಂತೆ ಇವಿಎಂಗಳ ಸರಬರಾಜು ವೇಳೆ 7,727 ಜನರು ಹಾಗೂ 10,819 ಇತರರು ಸೇರಿದಂತೆ 2,11,405 ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

lok sabha election, karnataka, fFirst phase,voting, begins

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ