ನೂರಕ್ಕೆ ನೂರರಷ್ಟು ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಒಂದು ಡಜನ್‍ಗೂ ಅಧಿಕ ಶಾಸಕರಿಗೆ ಮತ್ತೆ ನಿರಾಸೆ

ಬೆಂಗಳೂರು,ಆ.4- ಈ ಬಾರಿಯ ಸಚಿವ ಸಂಪುಟ ರಚನೆಯಲ್ಲಿ ತಮಗೆ ನೂರಕ್ಕೆ ನೂರರಷ್ಟು ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಒಂದು ಡಜನ್‍ಗೂ ಅಧಿಕ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ.

ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಹರತಾಳ ಹಾಲಪ್ಪ, ಕುಮಾರ್‍ಬಂಗಾರಪ್ಪ, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಪ್ರೀತಮ್‍ಗೌಡ, ಎಸ್.ಎ.ರಾಮದಾಸ್, ಬಾಲಚಂದ್ರ ಜಾರಕಿಹೊಳಿ, ಆಭಯ್‍ಪಾಟೀಲ್, ರಾಜೀವ್, ಪೂರ್ಣಿಮಾ ಶ್ರೀನಿವಾಸ್, ತಿಪ್ಪಾರೆಡ್ಡಿ, ನಾಗೇಶ್, ಸತೀಶ್‍ರೆಡ್ಡಿ, ಶಿವರಾಜ್‍ಪಾಟೀಲ್, ನೆಹರು ಓಲೇಕರ್ ಸೇರಿದಂತೆ ಮತ್ತಿತರರಿಗೆ ನಿರಾಸೆಯಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆಯೇ ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಪುನಃ ಎರಡನೇ ಬಾರಿಯಲ್ಲೂ ಮತ್ತೆ ಅವರಿಗೆ ನಿರಾಸೆಯಾಗಿದೆ.

ಅದರಲ್ಲೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ.ಪಿ.ರೇಣುಕಾಚಾರ್ಯ, ನಿಗಮ ಮಂಡಳಿ ಅಧ್ಯಕ್ಷ ರಾಜುಗೌಡ ನಾಯಕ್ ನೂರಕ್ಕೆ ನೂರರಷ್ಟು ಸಚಿವರಾಗುತ್ತೇವೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಇದೀಗ ಪಟ್ಟಿ ಹೊರ ಬೀಳುತ್ತಿದ್ದಂತೆ ಬಹುತೇಕರು ನಿರಾಸೆಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ