ಮೊದಲ ಗಸ್ತು ಯಶಸ್ವಿಯಾಗಿ ಪೂರೈಸಿದ ಐಎನ್ಎಸ್ ಅರಿಹಂತ್: ಪ್ರಧಾನಿ ಶ್ಲಾಘನೆ

ನವದೆಹಲಿ: ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಮೊದಲ ಗಸ್ತು ಯಶಸ್ವಿಯಾಗಿ ಮುಗಿಸಿದ್ದು, ಐಎನ್ ಎಸ್ ಅರಿಹಂತ್ ಯಶಸ್ವಿ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಐಎನ್ಎಸ್ ಅರಿಹಂತ್ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಬಂದ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ನೌಕೆ ದೇಶದ ಆಸ್ತಿ.ಇದು ಭಾರತದ ಹೆಮ್ಮೆ, ಇದರ ಯಶಸ್ಸಿಗೆ ಕಾರಣರಾದವರಿಗೆಲ್ಲ ನನ್ನ ಅಭಿನಂದನೆಗಳು. ದೇಶದ ರಕ್ಷಣೆಯಲ್ಲಿ, ವಿರೋಧಿಗಳನ್ನ ನಾಶ ಮಾಡುವ ಶಕ್ತಿಶಾಲಿ ನೌಕೆ ಐಎನ್ಎಸ್ ಅರಿಹಂತ್ ಎಂದು ಹೇಳಿದ್ದಾರೆ.

ನಮ್ಮ ರಾಷ್ಟ್ರದ ರಕ್ಷಣೆ ಅಥವಾ ಭದ್ರತೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಐಎನ್​ಎಸ್​ ಅರಿಹಂತ್ ಮೊದಲ ಹೆಜ್ಜೆಯಾಗಿದೆ. ಅರಿಹಂತ್ ಗಸ್ತು ಪೂರ್ಣಗೊಳಿಸುವ ಮೂಲಕ ನಮ್ಮ ರಾಷ್ಟ್ರದ ವೈರಿಗಳಿಗೆ ಬಹಿರಂಗ ಸವಾಲು ಹಾಕಿದೆ ಎಂದು ಹೇಳಿದರು.

ಪರಮಾಣು ಬಾಂಬ್​ ಹಾಕುವ ಬೆದರಿಕೆ ಹಾಕುವವರಿಗೆ ಅರಿಹಂತ್​ ಸ್ಪಷ್ಟ ಉತ್ತರವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇನ್ನು ದೀಪಾವಳಿಗೂ ಮುನ್ನ ಈ ಸಾಧನೆ ಮಾಡಿದ ಭಾರತೀಯ ನೌಕಾಪಡೆಯನ್ನು ಧನ್‌ತೇರಾ ಸ್ಪೆಷಲ್‌ ಎಂದು ಬಣ್ಣಿಸಿದ್ದಾರೆ.

INS Arihant, successfully completes its first deterrence patrol,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ