ನವದೆಹಲಿ:ಜು-೨೯: ಜುಲೈ ಹಾಗೂ ಆಗಸ್ಟ್ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ತುಂಬ ಮುಖ್ಯವಾದ ಅವಧಿ. ಕಾಲೇಜು ಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳು ಬದುಕಿನ ಇನ್ನೊಂದು ಆಯಾಮವನ್ನು ನೋಡಲು ಸಿದ್ಧರಾಗುತ್ತಾರೆ. ಈ ವೇಳೆ ಮುಂದಿನ ಭವಿಷ್ಯ, ವೃತ್ತಿ ಜೀವನದ ಬಗ್ಗೆ ಯೋಚಿಸಬೇಕು. ನಮ್ಮ ಬದುಕಿಗೆ ಒಂದಷ್ಟು ಗುರಿ ಹಾಕಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳನ್ನು ಹುರುದುಂಬಿಸಿದ್ದಾರೆ.
46ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮದ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಮೋದಿಯವರು,ಜುಲೈ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಸಮಯವಾಗಿದೆ. ಹೊಸ ಕಾಲೇಜು ಮತ್ತು ಶಾಲೆಗಳಿಗೆ ಮಕ್ಕಳು ದಾಖಲಾಗಬೇಕಾಗುತ್ತದೆ. ಕೆಲ ವಿದ್ಯಾರ್ಥಿಗಳು ಮನೆಯಿಂದ ಹೊರಬಂದು ಕಾಲೇಜುಗಳಿಗೆ ಸೇರ್ಪಡೆಗೊಳ್ಳಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಾಳ್ಮೆಯಿಂದ ಇರಬೇಕಿದ್ದು, ಜೀವನದ ಸಂತೋಷವನ್ನು ಆಹ್ಲಾದಿಸಬೇಕು ಎಂದು ತಿಳಿಸಿದರು.
ಆ.1ರಂದು ಲೋಕಮಾನ್ಯ ತಿಲಖರ ಪುಣ್ಯತಿಥಿಯಿದ್ದು ಅವರಿಗೆ ಗೌರವ ಸಲ್ಲಿಸುತ್ತೇನೆ. ತಿಲಕರು ಭಾರತದ ಜನರ ಹೃದಯದಲ್ಲಿ ನೆಲೆಸಿದ್ದರೆ. ಅವರ ಹೋರಾಟ ಮಾದರಿ ಎಂದು ಹೇಳಿದರು. ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆಯನ್ನು ಕೂಗಿದ್ದರು. ಜನರಲ್ಲಿ ಆತ್ಮವಿಶ್ವಾಸದ ಬೆಂಕಿಯನ್ನು ಹೊತ್ತಿಸಿದ್ದರು. ಇಂದು ಸೂರಜ್ ನನ್ನ ಜನ್ಮ ಸಿದ್ಧ ಹಕ್ಕು ಎಂದು ಒತ್ತಿ ಹೇಳಬೇಕಿದೆ. ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತೀಯೊಬ್ಬರನ್ನು ತಲುಪಬೇಕು. ಇದು ನವಭಾರತಕ್ಕೆ ಅಡಿಪಾಯವಾಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಥೈಲ್ಯಾಂಡ್ ಗುಹೆಯಲ್ಲಿ 12 ಬಾಲಕರು ಸಿಲುಕಿಕೊಂಡಿದ್ದರು. ಘಟನೆ ವೇಳೆ ಜನರು ತೋರಿದ ಜವಾಬ್ದಾರಿ ಅತ್ಯುತ್ತವಾಗಿತ್ತು. ಈ ಕಾರ್ಯಾಚರಣೆ ತಾಳ್ಮೆ, ಶೂರತೆ ಬಗ್ಗೆ ಸಾಕಷ್ಟು ಪಾಠ ಕಲಿಯುವಂತೆ ಮಾಡಿತ್ತು ಎಂದು ಹೇಳಿದ್ದಾರೆ.
ಹಿಂದಿಯ ಹೆಸರಾಂತ ಗೀತಕಾರ ಗೋಪಾಲ್ ದಾಸ್ ಅವರು ವಿಧಿವಶರಾಗಿರುವ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಜೀವನ ಬದಲಾಯಿಸಲು ಯುವಕರು ತಂತ್ರಾಜ್ಞಾನಗಳನ್ನು ಬಳಕೆ ಮಕಾಡುತ್ತಿದ್ದಾರೆ. ರಾಯ್ ಬರೇಲಿಯ ಇಬ್ಬರು ಯುವಕರು ಅಮೆರಿಕಾದಲ್ಲಿದ್ದು, ಸ್ಮಾರ್ಟ್ ಗಾಂವ್ ಆ್ಯಂಪ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್ ಗ್ರಾಮದಲ್ಲಿ ಡಿಜಿಟಲ್ ಕ್ರಾಂತಿಯನ್ನು ಸೃಷ್ಟಿಸಿದೆ. ಈ ಆ್ಯಪ್ ಮೂಲಕ ಗ್ರಾಮದ ಪ್ರತೀ ವಿಚಾರವನ್ನೂ ತಿಳಿದುಕೊಳ್ಳಬಹುದಾಗಿದೆ ಎಂದು ಹೊಗಳಿದ್ದಾರೆ.
ಅಹಮದಾಬಾದ್’ನ ಆಟೋ ಚಾಲಕನ ಮಗಳಾದ ಅಫ್ರಿನ್ ಶೇಖ್ ಕಡು ಬಡುತನದ ನಡುವೆಯ ಬಿಎಸ್ಇಬಿ ಪರೀಕ್ಷೆಯಲ್ಲಿ ಶೇ,.98.31ರಷ್ಟು ಅಂಕಗಳನ್ನು ಪಡೆದಿದ್ದು, ಅಫ್ರಿನ್ ಶೇಖ್ ಸಾಧನೆಯನ್ನು ಇದೇ ವೇಲೆ ಮೋದಿ ಶ್ಲಾಘಿಸಿದ್ದಾರೆ.
ಐಎಎಎಫ್ 20ರ ವಯೋಮಿತಿಯ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್’ನ ಮಹಿಳೆಯ ವಿಭಾಗದಲ್ಲಿ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ದಾಖಲೆ ಮಾಡಿರುವ ಹಿಮಾದಾಸ್ ಅವರನ್ನೂ ಮೋದಿಯವರು ಕೊಂಡಾಡಿದರು.
ಬಳಿಕ ಗಣೇಶ ಉತ್ಸವ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ದೇಶದ ಜನತೆಗೆ ಸಂದೇಶವನ್ನು ನೀಡಿರುವ ಅವರು, ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರೆ ನೀಡಿದ್ದಾರೆ.
PM Modi,Mann Ki Baat