ಸಾಮಾನ್ಯ ವರ್ಗದವರಿಗೆ ಶೇ. 10 ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ, ಮಸೂದೆಗೆ ವಿಪಕ್ಷಗಳ ಅಂಗೀಕಾರ ಸಿಗಬಹುದೆಂಬ ನಿರೀಕ್ಷೆ : ಪ್ರಧಾನಿ ಮೋದಿ

ಸೋಲಾಪುರ: ಬಡ ಸಾಮಾನ್ಯ ವರ್ಗದವರಿಗೆ ಶೇ. 10 ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ಹೆಜ್ಜೆಟ್ಟಿದ್ದು, ವಿಪಕ್ಷಗಳ ಪಕ್ಷಗಳ ಪ್ರತಿಭಟನೆ ನಡುವೆಯೂ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಗಬಹುದೆಂಬ ನಿರೀಕ್ಷೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲರಿಗೂ ಸಮಾನ ಅವಕಾಶವು ಸಿಗಬೇಕು ಎಂಬುದು ನಮ್ಮ ಉದ್ದೇಶ. ರಾಜ್ಯ ಸಭೆಯಲ್ಲೂ ಮಸೂದೆಗೆ ಅಂಗೀಕಾರ ಸಿಗಬೇಕೆಂಬ ಕಾರಣಕ್ಕಾಗಿಯೇ ಒಂದು ದಿನ ರಾಜ್ಯಸಭೆಯ ಕಲಾಪವನ್ನು ವಿಸ್ತರಿಸಾಗಿದೆ. ಮಸೂದೆಯು ಬಹುಶಃ ಅಂಗೀಕಾರವಾಗಬಹುದು. ಯಾಕೆಂದರೆ ಸಾಮಾಜಿಕ ನ್ಯಾಯಕ್ಕಾಗಿ ಜನರ ಆಶಯಗಳನ್ನು ವಿಪಕ್ಷಗಳೂ ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ನಿನ್ನೆಯಷ್ಟೇ ಲೋಕಸಭೆಯಲ್ಲಿ ರಾತ್ರಿವರೆಗೂ ಸುದೀರ್ಘವಾಗಿ ಮಸೂದೆ ಕುರಿತು ಚರ್ಚಿಸಲಾಗಿದೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಮಸೂದೆಯನ್ನು ಪಾಸ್‌ ಮಾಡಲಾಗಿದೆ. ಸಂವಿಧಾನದಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

ವಿಪಕ್ಷಗಳ ವಿರೋಧದ ನಡುವೆಯೂ ನಿನ್ನೆ ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಐತಿಹಾಸಿಕ ಮಸೂದೆಯು ಅಂಗೀಕಾರಗೊಂಡಿದ್ದು, ಇಂದು ಮೇಲ್ವರ್ಗದ ಆರ್ಧಿಕ ಹಿಂದುಳಿದವರಿಗೆ ಶೇ. 10 ಮೀಸಲಾತಿ ಕಲ್ಪಿಸುವ ಮಸೂದೆಯು ರಾಜ್ಯಸಭೆಯಲ್ಲಿ ಮಂಡನೆಯಾಗುತ್ತಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

PM Modi, inaugurates infrastructure projects, Solapur, Maharashtra

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ