ಪ್ರಧಾನಿ ಮೋದಿ ಮನ್ ಕಿ ಬಾತ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಪಟುಗಳ ಸಾಧನೆ, ಪ್ರವಾದಿ ಮೊಹಮ್ಮದರು, ಬುದ್ಧ ಪೂರ್ಣಿಮೆ ಮೊದಲಾದ ವಿಷಯ ಪ್ರಸ್ತಾಪ

ನವದೆಹಲಿ:ಏ-29: 2018 ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ 43ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಮಿಂಚಿದ ಭಾರತೀಯ ಸಾಧಕರನ್ನು ಕೊಂಡಾಡಿದ್ದಾರೆ. ನಮ್ಮ ಕ್ರೀಡಾಪಟುಗಳು ದೇಶದ ನಿರೀಕ್ಷೆಯಂತೆ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಇದರಂತೆ ಒಂದಮೇಲೊಂದರಂತೆ ಪದಕಗಳನ್ನು ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು.

ಒಂದೊಮ್ಮೆ ಸಮಯವಿತ್ತು… ಇಂದು ಯಾವ ಕ್ರೀಡಾಪಟು ಆಡುತ್ತಾರೆಂದು ಆಲೋಚಿಸುತ್ತಿದ್ದೆವು. ಆದರೆ, ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಇಡೀ ದೇಶ ಹಾಗೂ ದೇಶದ ಜನತೆ ಹಬ್ಬವನ್ನು ಆಚರಿಸುತ್ತಿದೆ. ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಅತ್ಯುದ್ಭುತವಾಗಿ ಸಾಧನೆ ಮಾಡಿದ್ದಾರೆ. ದೇಶದ ಹೆಮ್ಮೆ ಹೆಚ್ಚಿಸಿದ ಎಲ್ಲಾ ಮಹಿಳಾ ಕ್ರೀಡಾಪಟುಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಬಾರತಕ್ಕೆ ಗೆದ್ದು ತಂದ ಭಾರತೀಯ ಕ್ರೀಡಾಪಟುಗಳು, ಅಲ್ಲಿ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಮೊಳಗಿಸಿದ ಕ್ಷಣ ಬಹಳಷ್ಟು ವಿಶೇಷ ಹೆಮ್ಮೆ ಹಾಗೂ ಸಂತೋಷವನ್ನು ತಂದಿತು. ಮಹಿಳಾ ಕ್ರೀಡಾಪಡುಗಳು ಭಾರತದ ಹೆಮ್ಮೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ದೇಶದ ಮೂಲೇಗಳಿಂದ ಸಣ್ಣ ಸಣ್ಣ ನಗರಗಳಿಂದ ಬಂದಿರುತ್ತಾರೆ, ಇಂತಹ ಕ್ರೀಡಾಪಟುಗಳು ಸಾಕಷ್ಟು ಸಂಕಷ್ಟಗಳು ಹಾಗೂ ಏಳುಬೀಳುಗಳ್ನು ನೋಡಿರುತ್ತಾರೆ. 2018 ಕಾಮನ್ ವೆಲ್ತ್ ಕ್ರೀಡಾಕೂಟ ಭಾರತದ ಮೂರನೇ ಯಶಸ್ವೀ ಕ್ರೀಡಾಕೂಟವಾಗಿದೆ ಎಂದು ತಿಳಿಸಿದ್ದಾರೆ.

ಧಾರ್ಮಿಕ ವಿಚಾರಗಳನ್ನು ಪ್ರಸ್ತಾವಿಸಿದ ಪ್ರಧಾನಿ ರಂಜಾನ್‌ ಕುರಿತು ಮಾತನಾಡಿ, ‘ಇನ್ನು ಕೆಲ ದಿನಗಳಲ್ಲಿ ಪವಿತ್ರ ರಂಜಾನ್‌ ಮಾಸ ಆರಂಭವಾಗುತ್ತದೆ. ವಿಶ್ವದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಉಪವಾಸ ಮಾಡಿ ಪವಿತ್ರ ಮಾಸವನ್ನು ಆಚರಿಸಲಾಗುತ್ತದೆ ಎಂದರು. ಪ್ರವಾದಿ ಮೊಹಮ್ಮದರು ಜ್ಞಾನ ಮತ್ತು ಸಹಾನುಭೂತಿಯಲ್ಲಿ ನಂಬಿಕೆ ಉಳ್ಳವರಾಗಿದ್ದರು. ಅವರಿಗೆ ಅಹಂ ಇರಲಿಲ್ಲ. ಜ್ಞಾನ ಅಹಂಕಾರವನ್ನು ಸೋಲಿಸುತ್ತದೆ ಎಂದು ಅವರು ಹೇಳಿದ್ದರು . ನಿಮ್ಮ ಅವಶ್ಯಕತೆಗಿಂತ ಹೆಚ್ಚಿಗೆ ಏನನ್ನಾದರೂ ಹೊಂದಿದ್ದರೆ, ಅದನ್ನು ನೀವು ಅಗತ್ಯ ಉಳ್ಳವರಿಗೆ ದಾನ ಕೊಡಬೇಕು ಎಂದಿದ್ದರು. ಹಾಗಾಗಿ ಉಳ್ಳವರು ದಾನ ಮಾಡಬೇಕು ಎಂದರು.

ಇದೇ ವೇಳೆ ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನೂ ಕೋರಿದ ಅವರು, ಬುದ್ಧನು ಸಮಾನತೆ, ಶಾಂತಿ, ಪರಾನುಭೂತಿ ಮತ್ತು ಸಹೋದರತ್ವಕ್ಕೆ ಸ್ಫೂರ್ತಿ ಎಂದರು.

ಫಿಟ್‌ ಇಂಡಿಯಾ, ಯೋಗ, ನೀರಿನ ಮಿತ ಬಳಕೆ, ಕ್ಲೀನ್‌ ಇಂಡಿಯಾ ಹಾಗೂ1998 ರ ಪರಮಾಣು ಪರೀಕ್ಷೆ ಮುಂತಾದ ವಿಚಾರಗಳನ್ನು ಮೋದಿ ಪ್ರಸ್ತಾಪಿಸಿದರು.

PM Modi,addresses,Man ki Baat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ