ನಟಿ ಸಿಂಧು ಮೆನನ್ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು:ಮಾ-10: ಬ್ಯಾಂಕ್‌ಗೆ ವಂಚನೆ ಮಾಡಿದ ಆರೋಪ ಹಿನ್ನಲೆಯಲ್ಲಿ ನಟಿ ಸಿಂಧು ಮೆನನ್‌ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಬರೋಡ ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡದೆ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ನಟಿ ಸಿಂಧು ಮೆನನ್‌ ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಎಫ್ಐಆರ್‌ ದಾಖಲು ಮಾಡಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ 36 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಬ್ಯಾಂಕ್‌ ಮ್ಯಾನೇಜರ್‌ ನೀಡಿರುವ ದೂರಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನುಳಿದ ಆರೋಪಿಗಳಾದ ಸಿಂಧು ಸಹೋದರ ಮನೋಜ್‌ ಕಾರ್ತೀಕೇಯನ್‌ ವರ್ಮಾ , ಉದ್ಯಮಿಯೊಬ್ಬರ ಪುತ್ರಿ ನಾಗಶ್ರೀ ಶಿವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕ್‌ ಮ್ಯಾನೇಜರ್‌ ರಮೇಶ್‌ ಅವರು ಜನವರಿ 10 ರಂದು ದಾಖಲಿಸಿದ ದೂರಿನನ್ವಯ ಪೊಲೀಸರು ತನಿಖೆನಡೆಸಿದ್ದಾರೆ. ಸಿಂಧು ಅವರು ಸದ್ಯ ಅಮೆರಿಕಾದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

FIR,actress sindhu menon,bangalore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ