ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್: ರಾಜಧಾನಿಯಲ್ಲಿ ಭವ್ಯ ಸ್ವಾಗತ

ನವದೆಹಲಿ:ಮಾ-10: ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರನ್ನು ರಾಜಧಾನಿ ದೆಹಲಿಯಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದ್ದು, ಭಾರತೀಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು.

ನಾಲ್ಕು ದಿನ ಭಾರತ ಪ್ರವಾಸಕ್ಕೆ ಬಂದಿರುವ ಮ್ಯಾಕ್ರೋನ್ ಪತ್ನಿ ಬ್ರಿಗಿಟ್ಟೆ ಅವರನ್ನು ಕಳೆದ ರಾತ್ರಿ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸ್ವಾಗತಿಸಿದರು. ಇಂದು ಬೆಳಿಗ್ಗೆ ಮ್ಯಾಕ್ರೋನ್ ಪತ್ನಿ ಬ್ರಿಗಿಟ್ಟೆ ರಾಜ್ ಘಾಟ್’ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ಮಾರಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಬಳಿಕ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಮ್ಯಾಕ್ರೋನ್ ದಂಪತಿಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಸೈನಿಕರಿಂದ ಗೌರವ ವಂದನೆ ಸಲ್ಲಿಕೆ ಮಾಡಲಾಯಿತು.

ಇಂದು ಮ್ಯಾಕ್ರೋನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಬೇಟಿ ಮಾಡಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಂತೆಯೇ ಉಭಯ ದೇಶಗಳ ನಾಯಕರು ರಕ್ಷಣೆ, ಬಾಹ್ಯಾಕಾಶ, ಪರಮಾಣು ಸಹಕಾರ, ವ್ಯಾಪಾರ-ವಹಿವಾಟು ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

French President Emmanuel Macron, In India,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ