ಹೊಸದಿಲ್ಲಿ : ದೇಶದಲ್ಲಿನ ಕೊರೋನಾ ಬಿಕ್ಕಟ್ಟು ಒಂದೆಡೆಯಾದರೆ ವಾಯು ಮಾಲಿನ್ಯ ಸಮಸ್ಯೆ ಮತ್ತೊಂದೆಡೆ ಜನರನ್ನು ಬಾಸುತ್ತಿದ್ದು, 2019ರಲ್ಲಿ 16 ಲಕ್ಷಕ್ಕೂ ಅಕ ಮಂದಿ ವಾಯುಮಾಲಿನ್ಯದಿಂದಾಗಿ ಮೃತರಾಗಿದ್ದಾರೆ. ನವಜಾತ ಶಿಶುಗಳು ಮತ್ತು ಮಕ್ಕಳೇ ಅತಿಹೆಚ್ಚಾಗಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.
ಸ್ಟೇಟ್ ಆಫ್ ಗ್ಲೋಬಲ್ ಏರ್ (ಎಸ್ಒಜಿಎ) 2020 ವರದಿ ಪ್ರಕಾರ ಪರಿಸರದಲ್ಲಿ ಉಂಟಾಗುವ ವಾಯುಮಾಲಿನ್ಯ ಹಾಗೂ ಮನೆಗಳಲ್ಲಿ ಉಂಟಾಗುವ ವಾಯುಮಾಲಿನ್ಯದಿಂದಾಗಿ ಪಾಶ್ರ್ವವಾಯು, ಹೃದಯಾಘಾತ, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶ ಸಂಬಂತ ಕಾಯಿಲೆಗಳು ಉಂಟಾಗುತ್ತವೆ. ಇಂಹದ್ದೇ ಕಾರಣಗಳಿಂದಾಗಿ 2019ರಲ್ಲಿ 16,67,000 ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ.
ದೇಶದ ಹಲವು ಸಮಸ್ಯೆಗಳ ಜತೆಗೆ ವಾಯುಮಾಲಿನ್ಯ ಕೂಡ ಮಾರಣಾಂತಿಕವಾಗಿ ಪರಿಣಮಿಸಿದೆ ಎಂಬುದು ಸಾಬೀತಾಗಿದ್ದು, ಭಾರತದಲ್ಲಿ ದಾಖಲಾಗುವ ಪ್ರತಿ 8 ಸಾವುಗಳ್ಲಲಿ ಒಂದು ಮಾಲಿನ್ಯ ಸಂಬಂಸಿದ್ದಾಗಿದೆ ಎಂದು ವರದಿ ತಿಳಿಸಿದೆ.