ಪೆರಾರಿವಲನ್‍ಗೆ ಪೆರೋಲ್ ವಿಸ್ತರಣೆ

ಹೊಸದಿಲ್ಲಿ: ರಾಜೀವ್ ಗಾಂ ಹತ್ಯೆ ಪ್ರಕರಣದ ಅಪರಾ ಎ.ಜಿ. ಪೆರಾರಿವಲನ್‍ಗೆ ಪೆರೋಲ್ ಅವಯನ್ನು ಇನ್ನೂ ಒಂದು ವಾರ ಕಾಲದವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ. ಶುಕ್ರವಾರ ನೀಡಿದ ತೀರ್ಪಿನಲ್ಲಿ ಪೆರೋಲ್ ಅವಯನ್ನು ಮತ್ತೆ ವಿಸ್ತರಿಸಲಾಗದು ಎಂದು ಸುಪ್ರೀಂಕೋಟ್ ್ ತಿಳಿಸಿದೆ.
ನ್ಯಾಯಮೂರ್ತಿ ಎಲ್.ಎನ್. ರಾವ್ ನೇತೃತ್ವದ ಮೂರು ನ್ಯಾಯಾೀಶರ ಪೀಠವು ಪೆರಾರಿವಲನ್‍ಗೆ ನ.23ರಂದು ಪೆರೋಲ್ ನೀಡಿತ್ತು. ಪೆರಾರಿವಲನ್‍ಗೆ ಈ ಸಂದರ್ಭ ಭದ್ರತೆ ಒದಗಿಸುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ವೈದ್ಯಕೀಯ ಕಾರಣಕ್ಕೆ ಪೆರೋಲ್ ಮಂಜೂರು ಮಾಡಲಾಗಿದೆ. ಚೆನ್ನೈ ಸಮೀಪದ ಪಝಲ್ ಕೇಂದ್ರೀಯ ಕಾರಾಗೃಹದಲ್ಲಿ ಪೆರಾರಿವಲನ್ ಜೀವಾವ ಶಿಕ್ಷೆ ಅನುಭವಿಸುತ್ತಿದ್ದಾನೆ. ಮದ್ರಾಸ್ ಹೈಕೋರ್ಟ್ ಪೆರಾರಿವಲನ್‍ಗೆ ನ.9ರಿಂದ 23ರವರೆಗೆ ಪೆರೋಲ್ ನೀಡಿತ್ತು. ಸುಪ್ರೀಂಕೋರ್ಟ್ ಅವಯನ್ನು ವಿಸ್ತರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ