ನಿತೀಶ್ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯದ ಬಗ್ಗೆ ಚಕಾರ ಎತ್ತುವಂತಿಲ್ಲ: ಸಿಂಗ್ ಬಿಜೆಪಿ – ಜೆಡಿಯು ಜೋಡಿ, ಸಚಿನ್-ಸೆಹವಾಗ್ ಜೋಡಿಗೆ ಸಮ

ಹೊಸದಿಲ್ಲಿ: ಕ್ರಿಕೆಟ್‍ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹವಾಗ್ ಜೋಡಿ ಎಷ್ಟು ಪ್ರಸಿದ್ಧವೋ, ಬಿಹಾರದಲ್ಲೂ ಬಿಜೆಪಿ- ಜೆಡಿಯು ಜೋಡಿ ಅಷ್ಟೇ ಹೆಸರುವಾಸಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಬಿಹಾರ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಯಾರೂ ಚಕಾರ ಎತ್ತುವಂತಿಲ್ಲ ಎಂದು ಹೇಳಿದ್ದಾರೆ.
ಆರ್‍ಜೆಡಿ ನೇತೃತ್ವದ 15 ವರ್ಷದ ಮೈತ್ರಿ ಆಡಳಿತಕ್ಕೂ, ನಿತೀಶ್ ಕುಮಾರ್ ನೇತೃತ್ವದ ಆಡಳಿತಕ್ಕೂ ಇರುವ ವ್ಯತ್ಯಾಸವನ್ನು ಜನರು ಅರಿತಿದ್ದಾರೆ. ಏಕೆಂದರೆ ಆರ್‍ಜೆಡಿ ಕೇವಲ ಭಷ್ಟ್ರ ರಾಜಕಾರಣ ನಡೆಸಿದ್ದರೆ, ಇತ್ತ ನಿತೀಶ್ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡಿ ಮೆಚ್ಚುಗೆ ಸಂಪಾದಿಸಿದೆ ಎಂದು ತಿಳಿಸಿದ್ದಾರೆ.
ಹಾಗಾಗಿ ಕ್ರಿಕೆಟ್‍ನಲ್ಲಿ ಓಪನಿಂಗ್ ಜೋಡಿ ಎಂದು ತೆಂಡೂಲ್ಕರ್ – ಸೆಹವಾಗ್ ಜೋಡಿ ಎಷ್ಟು ಪ್ರಸಿದ್ಧವಾಗಿತ್ತೋ, ಬಿಜೆಪಿ- ಜೆಡಿಯು ಮೈತ್ರಿಯೂ ಅಷ್ಟೇ ಪ್ರಸಿದ್ಧ ಎಂದು ಸಿಂಗ್ ಹೇಳಿದ್ದಾರೆ.
15 ವರ್ಷ ಆಡಳಿತ ನಡೆಸಿದ್ದರೂ, ಬಿಹಾರದ ಜನರಿಗೆ ಲಾಟಿನ್‍ನಿಂದ ಮುಕ್ತಿ ದೊರೆತಿರಲಿಲ್ಲ. ಆದರೆ ಬಿಜೆಪಿ – ಜೆಡಿಯು ಮೈತ್ರಿಯ ಅಲ್ಪಾವ ಆಡಳಿತದಲ್ಲಿ ಬಿಹಾರಕ್ಕೆ ವಿದ್ಯುತ್, ರಸ್ತೆ, ನೀರು ಸೇರಿ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಹಾಗಾಗಿ ಎರಡು ಸರ್ಕಾರದ ಕಾರ್ಯದ ನಡುವೆ ಅಜಗಜಾಂತರವಿದ್ದು, ನಿತೀಶ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯದೊಂದಿಗೆ ಆರ್‍ಜೆಡಿ ನೇತೃತ್ವದ ಸರ್ಕಾರ ಎಂದಿಗೂ ಸರಿಸಮವಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ