ಗಡಿ ಪ್ರವೇಶಿಸಿದ ಚೀನಿ ಸೈನಿಕನ ಹಸ್ತಾಂತರಿಸಿದ ಭಾರತ

ಹೊಸದಿಲ್ಲಿ : ಭಾರತ-ಚೀನಾ ಗಡಿವಿವಾದದ ನಡುವೆಯೇ ಲಡಾಖ್‍ನ ಚುರ್ಮಾ -ಡಮ್ಚೋಕ್ ಪ್ರದೇಶದಲ್ಲಿ ಭಾರತೀಯ ಭೂ ಪ್ರದೇಶ ಪ್ರವೇಶಿಸಿ ಸೆರೆ ಸಿಕ್ಕಿದ್ದ ಚೀನಿ ಸೈನಿಕನನ್ನು ಭಾರತ ಚೀನಾಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದು, ಭಾರತದ ಕಾರ್ಯಕ್ಕೆ ಚೀನಾಕೂಡ ಧನ್ಯವಾದ ತಿಳಿಸಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಪ್ರದೇಶಿಸಿದ್ದ ಚೀನಿ ಸೈನಿಕನನ್ನು ಭಾರತೀಯ ಭದ್ರತಾಪಡೆಗಳು ಬಂಸಿತ್ತಾದರೂ, ಗಡಿ ಬಿಕ್ಕಟ್ಟುಗಳ ನಡುವೆಯೂ ಮಾನವೀಯತೆ ಮೆರೆದು ಆತನಿಗೆ ನೀರು, ಹೊದಿಕೆ, ಊಟವನ್ನು ನೀಡಿತ್ತು.

ನಂತರ ಸೈನಿಕನನ್ನು ಕೆಲವು ತನಿಖೆಗಳಿಗೆ ಒಳಪಡಿಸಲಾಗಿದ್ದು, ಈಗ ವಿಚಾರಣೆ ಪೂರ್ಣಗೊಂಡ ಹಿನ್ನೆಲೆ ಶಿಷ್ಟಾಚಾರಗಳ ಅನ್ವಯ ಆತನನ್ನು ಚುಶುಲ್ ಪ್ರದೇಶದಲ್ಲಿ ಚೀನಾಗೆ ಹಸ್ತಾಂತರಿಸಿದೆ. ಚೀನಾ ಕೂಡ ಸೈನಿಕನನ್ನು ಭಾರತ ಸುರಕ್ಷಿತವಾಗಿ ಹಿಂದಿರುಗಿಸುವ ನಂಬಿಕೆ ಇದೆ ಎಂದು ಹೇಳಿಕೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ