ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿ, ಕೋವಿಡ್-19 ಸ್ಥಿತಿಗತಿ ಹಾಗೂ ಕೋವಿಡ್ ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿರುವ ಸಿದ್ಧತೆಯ ಪರಿಶೀಲನೆ ನಡೆಸಿದರು. ಈ ಮಹತ್ವದ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ನಾನಾ ಇಲಾಖೆಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಆರೋಗ್ಯ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದ್ದು, ಇವು ಸಂಪೂರ್ಣ ಸುರಕ್ಷಿತ ಮತ್ತು ಸೋಂಕು ನಿಯಂತ್ರಣ ಶಕ್ತಿ ಹೊಂದಿವೆ ಎಂದು ಸಭೆ ಅನುಮೋದಿಸಿದೆ. ಕೋವಿಡ್-19 ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸಿರುವ ಸಿದ್ಧತೆ ಕುರಿತು ಸಮಾಲೋಚನೆ ನಡೆಸಿದ ಪ್ರಧಾನಂತ್ರಿ ಅವರು, ಜನರ ಪಾಲ್ಗೊಳ್ಳುವಿಕೆ, ಚುನಾವಣಾ ಅನುಭವದ ಬಳಕೆ ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ತತ್ವಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶಾದ್ಯಂತ ಸುಮಾರು 3 ಕೋಟಿ ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ 50 ವರ್ಷ ದಾಟಿದವರಿಗೆ ಸೋಂಕಿತರಿಗೆ ಮತ್ತು ಮೂರನೇ ಹಂತದಲ್ಲಿ 50 ವರ್ಷದೊಳಗಿನ ಗುಂಪುಗಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೋ-ವಿನ್ ಲಸಿಕಾ ವಿತರಣೆ ನಿರ್ವಹಣೆ ವ್ಯವಸ್ಥೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು ಈಗಾಗಲೇ 79 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
Related Articles
ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು
July 13, 2021
Varta Mitra News - SP
ರಾಷ್ಟ್ರೀಯ
Comments Off on ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು
Seen By: 60 ತ್ರಿಶೂರು: ದೇಶದ ಮೊದಲ ಕೊರೋನಾ ಸೋಂಕಿತೆ ಎಂದು ಗುರುತಿಸಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿನಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ಕೇರಳದ ಆರೋಗ್ಯ ಇಲಾಖೆ ಮಂಗಳವಾರ [more]
ಇಂದು ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ
November 24, 2020
Varta Mitra News - SP
ರಾಷ್ಟ್ರೀಯ, ಸಿಎಂ ಹೆಚ್ಡಿಕೆ, ಪ್ರಧಾನಿ ಮೋದಿ, ಆರೋಗ್ಯ
Comments Off on ಇಂದು ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ
Seen By: 61 ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿರುವ ಕೊರೋನಾ ಪರಿಸ್ಥಿತಿ, ಕೊರೋನಾ ಲಸಿಕೆಯ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮುಖ್ಯಮಂತ್ರಿಗಳ [more]
ಈಗ ಲಾಕ್ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ
October 21, 2020
Varta Mitra News - SP
ರಾಷ್ಟ್ರೀಯ
Comments Off on ಈಗ ಲಾಕ್ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ
Seen By: 39 ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶ ಬಹಳಷ್ಟು ಮುಂದೆ ಸಾಗಿರಬಹುದು. ಆದರೆ ದೇಶದಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದರೂ, ವೈರಾಣು ಹಾಗೆಯೇ ಉಳಿದಿದೆ ಎಂಬುದನ್ನು ಜನರು [more]