ಕೃಷಿ ಕಾಯ್ದೆಗಳಿಗೆ 850ಕ್ಕೂ ಹೆಚ್ಚು ಬೋಧಕರ ಬೆಂಬಲ

ಹೊಸದಿಲ್ಲಿ: ದೇಶಾದ್ಯಂತ ಹಲವು ಶೈಕ್ಷಣಿಕ ಸಂಸ್ಥೆಗಳ 850ಕ್ಕೂ ಹೆಚ್ಚು ಬೋಧಕ ವರ್ಗವು 3 ಹೊಸ ಕೃಷಿ ಕಾಯ್ದೆಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿ ಸಹಿ ಅಭಿಯಾನ ನಡೆಸಿವೆ.
ಈ ಸಂಬಂಧ ಬಹಿರಂಗ ಪತ್ರದಲ್ಲಿ , ರೈತರ ಜೀವನೋಪಾಯವನ್ನು ರಕ್ಷಿಸಲಾಗುವುದು ಎಂಬ ಸರ್ಕಾರದ ಭರವಸೆ ಮೇಲೆ ತಮಗೆ ಅಗಾಧ ನಂಬಿಕೆಯಿದೆ ಎಂದು ಹಲವು ಶಿಕ್ಷಣ ಸಂಸ್ಥೆಗಳ 850ಕ್ಕೂ ಅಕ ಬೋಧಕರು ಪ್ರತ್ಯೇಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಹೊಸ ಕಾಯ್ದೆಗಳು ಕೃಷಿ ವ್ಯಾಪಾರಕ್ಕಿದ್ದ ಎಲ್ಲ ನಿರ್ಬಂಧಗಳನ್ನು ಮುಕ್ತಗೊಳಿಸಲಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳ ವಹಿವಾಟನ್ನು ಪೈಪೊಟಿ ದರಗಳಲ್ಲಿ ನಡೆಸಲು ಅವಕಾಶ ದೊರೆಯುತ್ತದೆ ಎಂದು ಬೋಧಕ ವರ್ಗ ತಿಳಿಸಿದೆ.
ಈ ಮೂರು ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ)ಯನ್ನು ರದ್ದುಗೊಳಿಸುವುದಿಲ್ಲ. ಬದಲಿಗೆ, ಮಂಡಿಗಳ ಹೊರತಾಗಿಯೂ ಇತರೆ ಮಾರುಕಟ್ಟೆ ಗಳಲ್ಲಿ ಕೃಷಿ ವ್ಯಾಪಾರಕ್ಕೆ ಅನುವು ನೀಡುವ ಮೂಲಕ ಎಲ್ಲ ಅಕ್ರಮ ಮಾರುಕಟ್ಟೆಗಳನ್ನು ನಿರ್ಬಂಸುತ್ತದೆ ಎಂದು ಭ ರವಸೆ ನೀಡಿರುವುದನ್ನು ಸ್ವಾಗತಿಸಿ ಬಹಿರಂಗ ಪತ್ರಕ್ಕೆ 866 ಬೋಧಕರು ಸಹಿ ಹಾಕಿದ್ದಾರೆ.
ಈ ಬಹಿರಂಗ ಪತ್ರಕ್ಕೆ ದಿಲ್ಲಿ ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‍ಯು) ಸೇರಿ ದೇಶದ ಇತರೆ ವಿಶ್ವವಿದ್ಯಾಲಯಗಳ ಬೋಧಕರು ಸಹಿ ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ