ಸೆಪ್ಟೆಂಬರ್‍ನಿಂದ ಸ್ಪುಟ್ನಿಕ್ ಉತ್ಪಾದನೆ ಆರಂಭ

Vaccine for application against coronavirus.

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ವಿರುದ್ಧದ ಲಸಿಕೆಗಳನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಬೆನ್ನಲ್ಲೇ, ರಷ್ಯಾ ನಿರ್ಮಿತ ಸ್ಪುಟ್ನಿಕ್-5 ಲಸಿಕೆಯನ್ನು ಸೆಪ್ಟೆಂಬರ್‍ನಿಂದ ಪುಣೆ ಮೂಲದ ಲಸಿಕೆ ತಯಾರಕ ಸಂಸ್ಥೆ ಸೆರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ) ಉತ್ಪಾದಿಸಲಿದೆ ಎಂದು ರಷ್ಯಾದ ನೇರ ಹೂಡಿಕೆ ನಿ (ಆರ್‍ಡಿಐಎಫ್) ತಿಳಿಸಿದೆ.

ಭಾರತದಲ್ಲಿ ಸ್ಪುಟ್ನಿಕ್ ಉತ್ಪಾದಿಸಲು ಇನ್ನೂ ಹಲವು ತಯಾರಕರು ಸಿದ್ಧರಿದ್ದು, ಸದ್ಯಕ್ಕೆ ಸೆರಂನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾರ್ಷಿಕವಾಗಿ 30 ಕೋಟಿ ಡೋಸ್ ಲಸಿಕೆ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿದ್ದು, 2021ರಲ್ಲಿ ಮೊದಲ ಬ್ಯಾಚ್ ಲಸಿಕೆಗಳ ಉತ್ಪಾದನೆಯಾಗಲಿದೆ ಎಂದು ಆರ್‍ಡಿಐಎಫ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ