ವರ್ಗಾವಣೆಗೆ ಲಂಚ : ಸಿದ್ದರಾಮಯ್ಯ ಆರೋಪ

ಬಾದಾಮಿ: ಬಹುಮತವಿಲ್ಲದೆ ಆಪರೇಶನ್ ಕಮಲದಿಂದ ಅಕಾರಕ್ಕೆ ಬಂದ ಸರ್ಕಾರದ ಮಂತ್ರಿಗಳು ಅನುದಾನ ಬಿಡುಗಡೆ ಮಾಡಲು, ಎನ್‍ಒಸಿ ಕೊಡಲು ಶೇ.10 ಹಣ ಪಡೆಯುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊಡುತ್ತಿಲ್ಲ. ಸಿಎಂ ಪುತ್ರ ವಿಜಯೇಂದ್ರ ಜೆಸಿಬಿಯಲ್ಲಿ ದುಡ್ಡು ಬಾಚುತ್ತಿದ್ದಾರೆ. ಜನ ಬಿಜೆಪಿಗೆ ಯಾಕೆ ವೋಟ್ ಹಾಕತಾರೆ ಎಂಬುದು ತಿಳಿಯುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ದುಡ್ಡು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.

ಕಬ್ಬಲಗೇರಿಯಿಂದ 125 ಕಿ.ಮೀ.ಕಾಲುವೆಗೆ ನೀರು ಹರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸರ್ಕಾರದ ಬಳಿ ಹಣ ಇಲ್ಲ.ಯಾವುದೇ ಯೋಜನೆಗೆ ಅನುದಾನ ನೀಡುತ್ತಿಲ್ಲ. ವರ್ಗಾವಣೆಗೆ ಭಾರಿ ಹಣ ಪಡೆಯುತ್ತಿದ್ದು ಸಬ್ ರಿಜಿಸ್ಟ್ರಾರ್, ಪಿಎಸ್‍ಐ ವರ್ಗಾವಣೆಗೆ ರೂ.60 ಲಕ್ಷ ಲಂಚ ಪಡೆಯುತ್ತಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರವಿದ್ದಾಗ ಕೆರೂರ ಏತ ನೀರಾವರಿ, ಬಾದಾಮಿ, ಕೆರೂರ 18 ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ತ್ರಿಸ್ಟಾರ್ ಹೋಟೆಲ್, ಪಾಕಿರ್ಂಗ್ ಪ್ಲಾಜಾ ಕ್ರಿಯಾ ಯೋಜನೆ ತಯಾರಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಎರಡು ಮೂರು ವರ್ಷದ ನಂತರ ಅನುದಾನ ನೀಡಿದ್ದಾರೆ ಎಂದರು.

ಬನಶಂಕರಿ ಹಂಪಿ ವಿವಿ ಸ್ಥಳಾಂತರ ಮಾಡುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಬಾರಿ ಬಾದಾಮಿಗೆ ಬಂದಾಗ ಬನಶಂಕರಿಗೆ ಭೇಟಿ ನೀಡುತ್ತೇನೆ. ಇಲ್ಲಿ ಪ್ರವಾಸೋದ್ಯಮ ಬೆಳೆಯಲು ತ್ರಿಸ್ಟಾರ್ ಹೋಟೆಲ್ ಆಗಬೇಕು. ಹಂಪಿ ವಿವಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮಾಜಿ ಸಚಿವ ಎಚ್.ವೈ.ಮೇಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ