
ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್ ಹಣಕಾಸು ಮಾರುಕಟ್ಟೆಗಳ ಕುರಿತ ಮೊದಲನೇ ಸಂವಾದ ಸಭೆ ವರ್ಚುವಲ್ ಮೂಲಕ ಗುರುವಾರ ಸಂಜೆ ನಡೆದಿದ್ದು, ಎರಡೂ ದೇಶಗಳ ಪ್ರತಿನಿಗಳು 4 ವಿಷಯಗಳನ್ನು ಕೇಂದ್ರೀಕರಿಸಿ ಸಂವಾದ ನಡೆಸಿದ್ದಾರೆ.
ಸಂವಾದದಲ್ಲಿ ಉಲ್ಲೇಖಿಸಲಾದ 4 ಮಹತ್ವದ ವಿಷಯಗಳು ಹೀಗಿವೆ. 1. ಗಿಫ್ಟ್ ನಗರ (ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ). 2. ಬ್ಯಾಂಕಿಂಗ್ ಮತ್ತು ಪಾವತಿಗಳು. 3. ವಿಮೆ. 4. ಬಂಡವಾಳ ಮಾರುಕಟ್ಟೆಗಳು.
ರಿಸರ್ವ್ ಬ್ಯಾಂಕ್, ಸೆಬಿ, ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸರ್ವೀಸಸ್ ಸೆಂಟರ್, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಕಾರ, ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಹಣಕಾಸು ನಡೆವಳಿಕೆ ಪ್ರಾಕಾರ ಪ್ರತಿನಿಗಳು ಸಂವಾದದಲ್ಲಿ ಭಾಗವಹಿಸಿದ್ದರು.
ಸಿಟಿ ಆಫ್ ಲಂಡನ್ ಕಾರ್ಪೋರೇಶನ್ನ ಬಂಡವಾಳ ಮಾರುಕಟ್ಟೆ ತಂಡವು ಭಾರತೀಯ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯಲ್ಲಿ ತನ್ನ ಕಾರ್ಯವನ್ನು ಪ್ರಸ್ತುತ ಪಡಿಸಿತು. ಭಾರತ-ಬ್ರಿಟನ್ ಹಣಕಾಸು ಸಹಭಾಗಿತ್ವದ ಪ್ರತಿನಿಗಳು ಹಣಕಾಸು ಸೇವೆಗಳ ಸಂಬಂಧದ ಕುರಿತು ಶಿಫಾರಸುಗಳನ್ನು ಮಂಡಿಸಿದರು.