ಕಾಂಗರೂಗಳನ್ನ ಬೇಟೆಯಾಡಿದ ಕೊಹ್ಲಿ ಸೈನ್ಯ ಜಯಭೇರಿ ಧವನ್ ಸೆಂಚೂರಿ ಕಾಂಗರೂಗಳಿಗೆ ಕಿರಿಕಿರಿ..!

ಕೊಹ್ಲಿ ಸೈನ್ಯ ವಿಶ್ವ ಯುದ್ದದ್ದ ಕಾಂಗರೂಗಳನ್ನ ಭರ್ಜರಿಯಾಗಿ ಬೇಟೆಯಾಡಿದೆ. ಮೊದಲ ಪಂದ್ಯದಲ್ಲಿ ಹರಿಣಗಳನ್ನ ಬೇಟೆಯಾಡಿದ್ದ ಟೀಂ ಇಂಡಿಯಾ ಸತತ ಎರಡನೇ ಗೆಲುವು ದಾಖಲಿಸಿ ಕಾಂಗರೂಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ನಿನ್ನೆ ಒವೆಲ್ ಅಂಗಳದಲ್ಲಿ ಇಂಡೋ – ಆಸಿಸ್ ಕದನ ಹೇಗಿತ್ತು ಅನ್ನೋದನ್ನ ನೋಡೋಣ.

ಸಾಲಿಡ್ ಓಪನಿಂಗ್ ಕೊಟ್ಟ ಡ್ಯಾಶಿಂಗ್ ಓಪನರ್ಸ್
ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಟೀಂ ಇಂಡಿಯಾ ಪರ ಓಪನರ್ಸ್ಗಳಾಗಿ ಬಂದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆeಛಿeಟಿಣ ಓಪನಿಂಗ್ ಕೊಟ್ರು. ಆಸಿಸ್ ಬೌಲಿಂಗ್ ಅಟ್ಯಾಕನ್ನ ಆರಂಭದಲ್ಲೆ ಉಡೀಸ್ ಮಾಡಿದ ಈ ಜೋಡಿ ಮೊದಲ ವಿಕೆಟ್ಗೆ 127 ರನ್ ಸೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿ ಕೊಟ್ರು.

ಆರಂಭದಲ್ಲೆ ರನ್ ಮಳೆ ಸುರಿಸಿದ ಈ ಜೋಡಿ ಆಸಿಸ್ ಬೌಲರ್ಸ್ಗಳ ಬೆವರಿಳಿಸಿದ್ರು. ಆರಂಭದಲ್ಲೆ ಬೌಂಡರಿಗಳ ಸುರಿಮಳೆಗೈದ ಈ ಜೋಡಿ 114 ಎಸೆತದಲ್ಲಿ ನೂರು ರನ್ಗಳ ಜೊತೆಯಾಟ ನೀಡಿ ಭರವಸೆ ಮೂಡಿಸಿದ್ರು.

ಅರ್ಧ ಶತಕ ಬಾರಿಸಿದ ರೋಹಿತ್, ಧವನ್
ಆರಂಭದಲ್ಲೆ ಆಸಿಸ್ ಬೌಲರ್ಸ್ಗಳನ್ನ ಚೆಂಡಾಡಿದ ಧವನ್ ಮತ್ತು ರೋಹಿತ್ ಶರ್ಮಾ ತಲಾ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಡ್ಯಾಶಿಂಗ್ ಓಪನರ್ ಶಿಖರ್ ಧವನ್ 53 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರೆ SLOW AND  STEADY ಇನ್ನಿಂಗ್ಸ್ ಕಟ್ಟಿದ ರೋಹಿತ್ ಶರ್ಮಾ 61 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. 57 ರನ್ ಗಳಿದ್ದ ರೋಹಿತ್ ವೇಗಿ ಕೌಲ್ಟರ್ ನೈಲ್ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾರಿಗೆ ಕ್ಯಾಚ್ ನೀಡಿ ಹೊರ ನಡೆದ್ರು.

ಸಾಲಿಡ್ ಸೆಂಚೂರಿ ಬಾರಿಸಿದ ಧವನ್
ಮೂರನೇ ಕ್ರಮಾಂಕದಲ್ಲಿ ಬಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಓಪನರ್ ಧವನ್ಗೆ ಒಳ್ಳೆ ಸಾಥ್ ಕೊಟ್ರು. ಆಸಿಸ್ ಬೌಲರ್ಸ್ಗಳನ್ನ ಮನ ಬಂದಂತೆ ಚೆಂಡಾಡಿದ ಈ ಜೋಡಿ ಓವೆಲ್ ಅಂಗಳದಲ್ಲಿ ರನ್ ಹೊಳೆಯನ್ನ ಹರಿಸಿತು. ಅರ್ಧ ಶತರಕ ನಂತರ ಕೊಹ್ಲಿ ಜೊತೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಧವನ್ ಶತಕ ಬಾರಿಸಿ ಅಬ್ಬರಿಸಿದ್ರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 17ನೇ ಶತಕ ಬಾರಿಸಿದ ಸಾಧನೆ ಮಾಡಿದ್ರು.

ಟೀಂ ಇಂಡಿಯಾ 5 ವಿಕೆಟ್ಗೆ 352 ರನ್
ನಂತರ ಧವನ್ 117 ರನ್ ಗಳಿಸಿದ್ದಾಗ ವೇಗಿ ಮಿಶೆಲ್ ಸ್ಟಾರ್ಕ್ಗೆ ಬಲಿಯಾದ್ರು. ನಾಲ್ಕನೆ ಕ್ರಮಾಂಕದಲ್ಲಿ ಅಚ್ಚರಿ ರೀತಿಯಲ್ಲಿ ಬಂದ ಹಾರ್ದಿಕ್ ಪಾಂಡ್ಯ ಕೊಹ್ಲಿ ಜೊತೆಗೂಡಿ ಹೊಡಿಬಡಿ ಬ್ಯಾಟಿಂಗ್ ಮಾಡಿ ತಂಡದ ಸ್ಕೋರನ್ನ ಮುನ್ನುರರ ಗಡಿ ದಾಟಿಸುವಲ್ಲಿ ನೆರವಾದ್ರು. ಹಾರ್ದಿಕ್ ಪಾಂಡ್ಯ 47, ಧೋನಿ 27, ವಿರಾಟ್ ಕೊಹ್ಲಿ 82, ಕೆ.ಎಲ್. ರಾಹುಲ್ ಅಜೇಯ 11 ರನ್ ಗಳಿಸಿದ್ರು. ಇದರೊಂದಿಗೆ ಟೀಂ ಇಂಡಿಯಾ ನಿಗದಿತ ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಕಲೆ ಹಾಕಿತು . ಆಸಿಸ್ ಪರ ಸ್ಟೊಯ್ನಿಸ್ಗೆ 2, ಸ್ಟಾರ್ಕ್, ಕೌಲ್ಟರ್ ನೈಲ್ ಮತ್ತು ಕಮಿನ್ ತಲ 1 ವಿಕೆಟ್ ಪಡೆದ್ರು.

ಆಸಿಸ್ಗೆ 353 ರನ್ ಗೆಲುವಿನ ಟಾರ್ಗೆಟ್
353 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆಸಿಸ್ಗೆ ಓಪನರ್ಸ್ಗಳಾದ ಡೇವಿಡ್ ವಾರ್ನರ್ ಮತ್ತು ಕ್ಯಾಪ್ಟನ್ ಆ್ಯರಾನ್ ಫಿಂಚ್ ಒಳ್ಳೆಯ ಓಪನಿಂಗ್ ಕೊಟ್ರು. ಆದರೆ 36 ರನ್ ಗಳಿಸಿದ್ದ ಕ್ಯಾಪ್ಟನ್ ಆ್ಯರಾನ್ ಫಿಂಚ್ ಹಾರ್ದಿಕ್ ಪಂಡ್ಯ ಓವರ್ನಲ್ಲಿ ರನೌಟ್ ಬಲೆ ಬಿದ್ರು. ನಂತರ ಬಂದ ಸ್ಮಿತ್ , ವಾರ್ನರ್ ಜೊತೆಗೂಡಿ ಎಚ್ಚರಿಕೆಯ ಆಟವಾಡಿದ್ರು. ಈ ವೇಳೆ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ ಡೇವಿಡ್ ವಾರ್ನರ್ ಚಹಲ್ ಎಸೆತದಲ್ಲಿ ಭುವನೇಶ್ವರ್ ಕುಮಾರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು.

ನಾಲ್ಕನೆ ಸ್ಲಾಟ್ನಲ್ಲಿ ಬಂದ ಉಸ್ಮಾನ್ ಕ್ವಾಜಾ 42 , ಗ್ಲೇನ್ ಮ್ಯಾಕ್ಸ್ವೆಲ್ 28,ಸ್ಟೀವ್ ಸ್ಮಿತ್ 69, ಆ್ಯಲೆಕ್ಸ್ ಕ್ಯಾರಿ ಅಜೇಯ 55 ರನ್ ಗಳಿಸಿದ್ರು. ಕೊನೆಗೆ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 316 ರನ್ಗಳಿಗೆಸರ್ವ ಪತನ ಕಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ