ವಿಶ್ವ ಮಹಾ ಸಮರದಲ್ಲಿ ಇಂಡೋ – ಪಾಕ್ ಮುಖಾಮುಖಿ: ಬದ್ಧ ವೈರಿ ವಿರುದ್ಧ ಆಡುತ್ತಾ ಟೀಂ ಇಂಡಿಯಾ ?

ಪುಲ್ವಾಮ ಉಗ್ರರ ದಾಳಿ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ವ್ಯವಸ್ಥೆಯನ್ನ ಬುಡಮೇಲು ಮಾಡಿದೆ. ಯಾವಗ್ಲೂ ಕಾಲು ಕೆರೆದುಕೊಂಡು ಬರುವ ಪಾಪಿ ಪಾಕಿಸ್ತಾನ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಯೋತ್ಪಾದಕರನ್ನ ಛೂ ಬಿಟ್ಟು ಪಾಪದ ಕೃತ್ಯಗಳನ್ನ ಮಾಡುತ್ತಾ ಬಂದಿದೆ.

ಒಂದಲ್ಲ ಖ್ಯಾತೆಗಳನ್ನ ತೆಗೆಯುತ್ತಾ ಭಾರತಕ್ಕೆ ಆಗಗ ತೊಂದರೆ ಕೊಡುತ್ತಾ ಬಂದಿರುವ ಪಾಕಿಸ್ತಾನ ತಾನು ನೆಮ್ಮದಿಯಾಗಿರದೇ ಬೇರೆಯವರನ್ನು ನೆಮ್ಮದಿಯಾಗಿರಲು ಬಿಡದೇ ಇದುವರೆಗೂ ನೆಡೆದು ಬಂದಿತ್ತು.

ಟೆನ್ಶನ್ ಹೆಚ್ಚಿಸಿದೆ ಪುಲ್ವಾಮ ಉಗ್ರರ ದಾಳಿ
ಪುಲ್ವಾಮ ಉಗ್ರರ ದಾಳಿ ಇದೀಗ ಭಾರತ ಪಾಕಿಸ್ತಾನ ನಡುವಿನ ಸಂಬಂಧವನ್ನ ಇನ್ನಷ್ಟು ಹದೆಗೆಡಿಸಿದೆ. ಮೊನ್ನೆ ಪುಲ್ವಾಮದಲ್ಲಿ ನಮ್ಮ ಹೆಮ್ಮಯ ವೀರ ಯೋಧರನ್ನ ಪಾಪಿ ಪಾಕಿಸ್ತಾನ ಉಗ್ರರ ನೆರವಿನಿಂದ ಕೊಂದು ಹಾಕಿತು. ಇದು ಇಡೀ ದೇಶವನ್ನ ಕೆರೆಳಿಸಿದೆ. ಇದು ಪಾಪಿ ಪಾಕ್ ವಿರುದ್ಧ ಯುದ್ಧ ಮಾಡುವ ಮಟ್ಟಿಗೆ ದ್ವೇಷದ ಕಿಚ್ಚು ಹತ್ತಿಸಿದೆ. ಅಷ್ಟೆ ಅಲ್ಲ ಪಾಪಿಗಳ ವಿರುದ್ಧ ಎಲ್ಲ ಸಂಬಂಧಗಳನ್ನ ಕಡಿದುಕೊಳ್ಳಲು ಆಗ್ರಹಿಸಲಾಗುತ್ತಿದೆ. ಇದರಲ್ಲಿ ಭಾರತ -ಪಾಕಿಸ್ತಾನ ನಡುವಿನ ಕ್ರಿಕೆಟ್ ಕೂಡ ಒಂದಾಗಿದೆ.

ಟೀಮ್ ಇಂಡಿಯಾ- ಪಾಕಿಸ್ತಾನ ವಿಶ್ವಕಪ್ ಪಂದ್ಯ ರದ್ದು ?
ಹೌದು ಈಗ ಎಲ್ಲಡೆ ಚರ್ಚೆಯಾಗುತ್ತಿರುವ ವಿಷಯ ಒಂದೇ ಅದು ಮುಂಬರುವ ವಿಶ್ವಕಪ್ ಮಹಾ ಸಮರದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಬೇಕಾ ? ಆಡಬಾರದಾ ಅನ್ನೋದರ ಬಗ್ಗೆ ಭಾರೀ ಚೆರ್ಚೆ ನಡೆಯುತ್ತಿದೆ.

ಭಾರತ – ಪಾಕಿಸ್ತಾನ ವಿಶ್ವಕ್ರಿಕೆಟ್ನಲ್ಲಿ ಎರಡು ಬದ್ಧ ವೈರಿಗಳು. ಆನ್ ಫೀಲ್ಡ್ನಲ್ಲಿ ಉಭಯ ತಂಡಗಳು ಗೆಲುವಿಗಾಗಿ ವೀರ ಸೇನಾನಿಗಳಂತೆ ಹೋರಾಡುತ್ತಾರೆ. ಇದಕ್ಕೆ ಈ ಹಿಂದೆ ನಡೆದ ರೋಚಕ ಕದನಗಳೇ ಸಾಕ್ಷಿ. ಭಾರತ – ಪಾಕಿಸ್ತಾನ ಪಂದ್ಯವೆಂದ್ರೆ ಇಡೀ ಕ್ರಿಕೆಟ್ ಜಗತ್ತೆ ನೋಡುತ್ತೆ. ಅಷ್ಟರ ಮಟ್ಟಿಗೆ ಕಾದಾಟ ಕಾವು ಇರುತ್ತೆ.

ಪಾಕ್ ವಿರುದ್ಧ ಪಂದ್ಯ ಆಡುತ್ತಾ ಟೀಂ ಇಂಡಿಯಾ ?
ಈ ಬಾರಿಯ ಪ್ರತಿಷ್ಠಿತ ವಿಶ್ವಕಪ್ ಆಂಗ್ಲರ ನಾಡಲ್ಲಿ ನಡೆಯಲಿದೆ. ಇಡೀ ವಿಶ್ವವನ್ನೆ ತುದಿಗಾಲಲ್ಲಿ ನಿಲ್ಲಿಸಿರುವ ಈ ಮಹಾ ಸಮರದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್ 16 ರಂದು ಮ್ಯಾಂಚೆಸ್ಟ್ರ್ನಲ್ಲಿ ಮುಖಾಮುಖಿಯಾಗಲಿವೆ. ಅಂದು ಈ ಬದ್ಧ ವೈರಿಗಳ ಕಾದಾಟವನ್ನ ಕಣ್ತುಂಬಿಕೊಳ್ಳಲು ಇಡೀ ಜಗತ್ತೆ ಕಾದು ಕೂತಿದೆ .

ಆದರೆ ಈಗ ನಡೆದಿರುವ ಪುಲ್ವಾಮ ದಾಳಿ ಇಡೀ ದೇಶ ಪಾಕ್ ವಿರುದ್ಧ ಆಕ್ರೋಶಭರಿತನಾಗಿ ಮಾಡಿದೆ. ಪಾಕ್ ವಿರುದ್ಧ ಎಲ್ಲ ಸಂಬಂಧಗಳನ್ನ ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡೋದು ಬೇಡ ಅಂತಾ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಪಾಕ್ ವಿರುದ್ಧ ದ್ವೀಪಕ್ಷೀಯ ಸರಣಿಯನ್ನ ಕೈಚೆಲ್ಲಿರುವ ಟೀಂ ಇಂಡಿಯಾ ಐಸಿಸಿ ಪ್ರಾಯೋಜತ್ವದ ಪಂದ್ಯಗಳನ್ನ ಮಾತ್ರ ಪಾಕ್ ವಿರುದ್ದ ಆಡುತ್ತಾ ಬಂದಿದೆ.

ಇದರ ಬಗ್ಗೆ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲ ಮಾತನಾಡಿದ್ದಾರೆ. ನಮ್ಮ ನಿಲುವು ಸರಿಯಾಗಿದೆ. ಸರ್ಕಾರ ಆದೇಶ ಕೊಡುವವರೆಗೂ ನಾವು ಪಾಕಿಸ್ತಾನ ಜೊತೆಗೆ ಆಡುವುದಿಲ್ಲ. ಕ್ರೀಡೆ ಎಲ್ಲದ್ಕಕಿಂತ ದೊಡ್ಡದು ಆದರೆ ಯಾರೋ ಭಯೋತ್ಪಾದನೆಗೆ ಪ್ರಾಯೋಜತ್ವ ನೀಡುತ್ತಿದ್ದಾಗ ಸಹಜವಾಗಿ ಕ್ರೀಡೆ ಮೇಲೂ ಪರಿಣಾಮ ಬೀರುತ್ತದೆ.

ರಾಜೀವ್ ಶುಕ್ಲಾ ಐಪಿಎಲ್ ಮುಖ್ಯಸ್ಥ ಮಾತನಾಡಿದ್ದಾರೆ
ವಿಶ್ವಕಪ್ಗಿನ್ನು ಇನ್ನು 99 ದಿನಗಳು ಬಾಕಿ ಇವೆ ಪಂದ್ಯ ನಡೆಯೋದು ಉಭಯ ದೇಶಗಳ ನಡುವಿನ ರಾಜತಾಂತ್ರಿಕಾ ಸಂಬಂಧದ ಮೇಲೆ ನಿಂತಿದ್ದು ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ