ಭಾರತದ ಹೊಸ ನೋಟುಗಳನ್ನು ನಿಷೇಧಿಸಿದ ನೇಪಾಳ

ಕಾಠ್ಮಂಡು: ನೇಪಾಳ ಸರ್ಕಾರ ಭಾರತದ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದೆ. ಈ ನಿರ್ಧಾರದಿಂದ ನೇಪಾಳ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರವಾಸಿಗರಿಗೆ ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಪಾಳಿಗಳಿಗೂ ಸಂಕಷ್ಟ ಎದುರಾಗಿದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 2000, 500 ಹಾಗೂ 200 ಮುಖಬೆಲೆಯ ನೋಟುಗಳನ್ನು ಮುದ್ರಿಸಿದ್ದು ಚಲಾವಣೆಗೆ ತರಲಾಗಿತ್ತು. ಇದೀಗ ನೇಪಾಳ ಸರ್ಕಾರ ತಮ್ಮ ದೇಶದಲ್ಲಿ ಭಾರತದ ನೂತನ ನೋಟುಗಳ ಚಲಾವಣೆ ನಿಷೇಧಿಸಿದೆ.

2020ಕ್ಕೆ ನೇಪಾಳ ಸರ್ಕಾರ ವಿಸಿಟ್ ನೇಪಾಳ ಇಯರ್ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತದ ನೂತನ ನೋಟುಗಳ ಚಲಾವಣೆಗೆ ದಿಗ್ಬಂದನ ಹಾಕಿದೆ.

Nepal,India,New Currency,Ban

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ