ಹೊಸದಿಲ್ಲಿ: 65 ವರ್ಷಕ್ಕಿಂತ ಹೆಚ್ಚಿನವರಿಗೆ ಆಸ್ಟ್ರಾಜೆನಿಕಾ ಲಸಿಕೆ ಪರಿಣಾಮಕಾರಿಯಾಗದು ಎಂಬ ಹೇಳಿಕೆಗಳನ್ನು ಆಸ್ಟ್ರಾಜೆನಿಕಾ ಸಂಸ್ಥೆ ತಳ್ಳಿ ಹಾಕಿದೆ.
ಯೂರೋಪಿಯನ್ ಒಕ್ಕೂಟದಲ್ಲಿ ವಯಸ್ಸಾದವರಲ್ಲಿ ಈ ಲಸಿಕೆಗೆ ಅನುಮೋದನೆ ನೀಡಲು ಅಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಜರ್ಮನಿ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದ ಬಳಿಕ ಸಂಸ್ಥೆ ಹೇಳಿಕೆ ನೀಡಿದೆ.
ಆಸ್ಟ್ರಾಜೆನಿಕಾ ಮತ್ತು ಆಕ್ಸ್ಫರ್ಡ್ ಯೂನಿವರ್ಸಿಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಆಸ್ಟ್ರಾಜೆನಿಕಾ ಲಸಿಕೆಯು
65 ವರ್ಷಕ್ಕಿಂತ ಹೆಚ್ಚಿನವರಲ್ಲಿ ಶೇ. 8ರಷ್ಟು ಅಥವಾ 10ಕ್ಕಿಂತ ಕಡಿಮೆ ಪರಿಣಾಮಕಾರಿ ಎಂದು ಜರ್ಮನಿಯ ಕೆಲ ಪತ್ರಿಕೆಗಳು ವರದಿ ಮಾಡಿದ್ದವು. ಲಸಿಕೆಯನ್ನು 65ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನೀಡಲು ಯೂರೋಪಿಯನ್ ಔಷಧ ಒಕ್ಕೂಟವು ಅನುಮೋದನೆ ನೀಡಿಲ್ಲ ಎಂದು ಜರ್ಮನಿ ಅಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆಂದು ವರದಿಯೊಂದು ತಿಳಿಸಿತ್ತು.
ಬ್ರಿಟನ್ ಜಂಟಿ ಸಮಿತಿ ಉತ್ತೇಜನ:
ತನ್ನ ಲಸಿಕೆ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪರಿಣಾಮಕಾರಿ ಅಲ್ಲ ಎಂಬುದು ಸಂಪೂರ್ಣವಾಗಿ ತಪ್ಪು ಎಂದು ಆಸ್ಟ್ರಾಜೆನೆಕಾ ಸಂಸ್ಥೆ ಹೇಳಿದೆ. ಬ್ರಿಟನ್ನ ಲಸಿಕೆ ನೀಡಿಕೆ ಮತ್ತು ಸಂರಕ್ಷಣೆ ಕುರಿತ ಜಂಟಿ ಸಮಿತಿಯು ಹಿರಿಯರಲ್ಲೂ ತನ್ನ ಲಸಿಕೆ ಬಳಕೆಗೆ ಉತ್ತೇಜನ ನೀಡಿದೆ ಎಂದು ಹೇಳಿದೆ.
ಲಸಿಕೆ ಪಡೆದ ಹಿರಿಯ ಪ್ರಯೋಗ ಕಾರ್ಯಕರ್ತರ ರಕ್ತ ವಿಶ್ಲೇಷಣೆಯು ಸಮರ್ಥ ಪ್ರತಿರೋಧಕ ಶಕ್ತಿಯ ಫಲಿತಾಂಶವನ್ನು ಲಸಿಕೆ ನೀಡಿದೆ ಎಂದು ಆಸ್ಟ್ರಾಜೆನಿಕಾ ಹೇಳಿದೆ.