ಕಾನೂನಾತ್ಮಕ ಅನುಮತಿಗೆ ಮುಂದಾದ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ತರಬೇತಿ

ಹೊಸದಿಲ್ಲಿ: ಕಿವಿ, ಮೂಗು, ಗಂಟಲು (ಇಎನ್‍ಟಿ), ನೇತ್ರಶಾಸ್ತ್ರ ಹಾಗೂ ದಂತ ಪ್ರಕ್ರಿಯೆ ಸೇರಿ ಹಲವು ಸಾಮಾನ್ಯ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಆಯುರ್ವೇದ ವೈದ್ಯರಿಗೂ ತರಬೇತಿ ನೀಡುವ ಮೂಲಕ ಕಾನೂನಾತ್ಮಕವಾಗಿ ಅನುಮತಿ ನೀಡುವ ಅಸೂಚನೆಯನ್ನು ಸರ್ಕಾರ ಹೊರಡಿಸಿದೆ.
ಈ ಅಸೂಚನೆಯು ಭಾರತೀಯ ವೈದ್ಯಕೀಯ ಕೇಂದ್ರ ಸಮಿತಿ(ಆಯುರ್ವೇದ ಶಿಕ್ಷಣದಲ್ಲಿ ಸ್ನಾತಕೋತ್ತರ)ಯ ಆಯುರ್ವೇದ ವೈದ್ಯರ ಸ್ನಾತಕೋತ್ತರ ತರಬೇತಿಯಲ್ಲಿನ 2016ರ ನಿಯಮಗಳ ತಿದ್ದುಪಡಿಯನ್ನು ಸಹ ಅಸೂಚನೆಯಲ್ಲಿ ಸೇರಿಸಲಾಗಿದೆ.
ಅದರಂತೆ, ಶಿಕ್ಷಣದ ಅವಯಲ್ಲಿ ಶಲ್ಯ ತಂತ್ರ (ಸಾಮಾನ್ಯ ಶಸ್ತ್ರಚಿಕಿತ್ಸೆ) ಮತ್ತು ಶಲಕ್ಯ ತಂತ್ರ (ಕಿವಿ, ಮೂಗು, ಗಂಟಲು, ತಲೆ ಮತ್ತು ನೇತ್ರದ ಶಸ್ತ್ರಚಿಕಿತ್ಸೆ)ನಂತಹ ಹಲವು ಶಸ್ತ್ರಚಿಕಿತ್ಸೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಸ್ನಾತಕೋತ್ತರ ಪದವೀಧರರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತದೆ.

58 ವಿಶೇಷ ಶಸ್ತ್ರಚಿಕಿತ್ಸೆಗೆ ಅನುವು
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡುವುದಕ್ಕಾಗಿ ಭಾರತೀಯ ವೈದ್ಯಕೀಯ ಸಮಿತಿಯು
ಸ್ನಾತಕೋತ್ತರ ಆಯುರ್ವೇದ ಶಿಕ್ಷಣದ 2020ರ ನಿಯಮಗಳಿಗೆ ತಿದ್ದುಪಡಿ ತಂದಿದೆ. ಅದರಂತೆ, 58 ವಿಶೇಷ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳನ್ನು ನಿಗದಿಪಡಿಸಲಾಗಿದ್ದು. ಸ್ನಾತಕೋತ್ತರ ಪದವಿಯ ಶಲ್ಯಮತ್ತು ಶಲಕ್ಯ ಹೊರತು ಇತರೆ ಯಾವುದೇ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಲಾಗಿಲ್ಲ ಎಂದು ಆಯುಷ್ ಸಚಿವಾಲಯ ಸ್ಪಷ್ಟಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ