ಗಣರಾಜ್ಯೋತ್ಸ :ಐಎಎಫ್‍ಮಹಿಳಾ ಅಕಾರಿಗಳಿಂದ ಇತಿಹಾಸ ಸೃಷ್ಟಿ

ಹೊಸದಿಲ್ಲಿ:ಗಣರಾಜ್ಯೋತ್ಸವ ಅಂಗವಾಗಿ ನಡೆಯುವ ಯುದ್ಧವಿಮಾನಗಳ ಪರೇಡ್‍ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ(ಐಎಎಫ್) ಇಬ್ಬರು ಮಹಿಳಾ ಪೈಲಟ್‍ಗಳು ಭಾಗಿಯಾಗಿದ್ದು,ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ರಾಜಪಥದಲ್ಲಿ ನಡೆದ ವಾಯುಪಡೆ ಸ್ತಬ್ಧಚಿತ್ರದಲ್ಲಿ ಭಾಗಿಯಾಗಿದ್ದು, ಇದರಲ್ಲಿ ಯುದ್ದ ವಿಮಾನಗಳು,ಯುದ್ಧ ಕಾಪ್ಟರ್‍ಗಳು ಹಾಗೂ ಸುಖೋಯ್-30 ಯುದ್ಧವಿಮಾನದ ಅಣುಕು ಪ್ರದರ್ಶನವನ್ನು ಪ್ರದರ್ಶಿಸಿದ್ದಾರೆ.

ಮತ್ತೊಬ್ಬ ಅಕಾರಿಯಾಗಿರುವ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ವಾಯುಪಡೆಯ ಯುದ್ಧವಿಮಾನಗಳ ಬಲ ಪ್ರದರ್ಶನಮಾಡಿದ್ದು, ನಾಲ್ಕು ಯುದ್ಧ ಕಾಪ್ಟರ್ ಗಳ ನಡುವೆ ಮಿ-17ವಿಫೈ ಯುದ್ಧ ಹೆಲಿಕಾಪ್ಟರ್‍ನ ಹಾರಾಟ ನಡೆಸಿದ್ದಾರೆ.

2021ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗಿಯಾಗುವ ಮೂಲಕ ಈ ಇಬ್ಬರು ಐಎಎಫ್ ಮಹಿಳಾ ಅಕಾರಿಗಳು ನಾರಿಶಕ್ತಿ ಪ್ರದರ್ಶಿಸಿದ್ದಾರಲ್ಲದೆ, ಪರೇಡ್‍ನಲ್ಲಿ ಮಹಿಳೆಯರು ಭಾಗಿಯಾಗುವುದಕ್ಕೂ ಹೊಸ ಮುನ್ನುಡಿ ಬರೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ